Baba Siddique ರೀತಿ ನಿನ್ನ ಹತ್ಯೆ; ಯೋಗಿ ಆದಿತ್ಯನಾಥ್​​​ಗೆ ಧಮ್ಕಿ ಹಾಕಿದ್ದ ಮಹಿಳೆ ಅರೆಸ್ಟ್​​​

Yogi Adityanath
Published on

ಥಾಣೆ: ಮುಂದಿನ 10 ದಿನದೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಮಾಜಿ ಸಚಿವ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ಕಿ (Baba Siddique) ರೀತಿಯಲ್ಲೇ ಹತ್ಯೆ ಮಾಡುವುದಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಫಾತಿಮಾ ಖಾನ್​ (24) ಎಂದು ಗುರುತಿಸಲಾಗಿದ್ದು, ಇವರು ಮಹಾರಾಷ್ಟದ ಥಾಣೆ ಮೂಲದವರು ಎಂದು ತಿಳಿದು ಬಂದಿದೆ. ಬಿಎಸ್​ಸ್ಸಿ (ಮಾಹಿತಿ ತಂತ್ರಜ್ಞಾನ) ಪದವಿಧರೆಯಾದ ಫಾತಿಮಾ ಮಾನಸಿಕ ಅಸ್ವಸ್ಥರೆಂದು ವರದಿಯಾಗಿದೆ. 

ನವೆಂಬರ್​ 02ರಂದು ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ (Baba Siddique) ​ಅವರನ್ನು ಕೊಂದ ರೀತಿಯಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ( Yogi Adityanath ) ಅವರನ್ನು ಕೊಲೆ ಮಾಡುತ್ತೇವೆ ಎಂಬ ಬೆದರಿಕೆ ಕರೆಯನ್ನು ಮುಂಬೈ ಪೊಲೀಸರು ಸ್ವೀಕರಿಸಿದ್ದರು.

ಇನ್ನೂ 10 ದಿನಗಳಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್​ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂಬ ಬೆದರಿಕೆಯನ್ನು ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಕಳುಹಿಸಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಬೆದರಿಕೆ ಸಂದೇಶ ಬಂದಿದ್ದ ನಂಬರ್​ಅನ್ನು ಪತ್ತೆ ಹಚ್ಚಿ ಯುವತಿಯನ್ನು ಬಂಧಿಸಿದ್ದಾರೆ.

ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕಿ (Baba Siddique) ಅವರನ್ನು ಅವರ ಮಗ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಬಾಬಾ ಸಿದ್ದಿಕಿ​ ಅವರು ಬಾಲಿವುಡ್​ ನಟ ಸಲ್ಮಾನ್​ ಖಾನ್​ರೊಂದಿಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ಕೊಂದಿದ್ದಾಗಿ ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಒಪ್ಪಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net