

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡವು 25 ರನ್ಗಳ ಜಯ ಸಾಧಿಸಿದ್ದು, ಈ ಮೂಲಕ ಭಾರತದ ನೆಲದಲ್ಲಿ ಸರಣಿ ಒಂದನ್ನು ಕ್ಲೀನ್ಸ್ವೀಪ್ ಮಾಡುವ ಐತಿಹಾಸಿಕ ದಾಖಲೆಯನ್ನು ಬರೆದಿದೆ.
92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಭಾರತ ತಂಡವನ್ನು (Team India) 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ಸಹ ನ್ಯೂಜಿಲೆಂಡ್ ತಂಡ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ (New Zealand) ತಂಡವು ಡೆರಿಲ್ ಮಿಚೆಲ್ (82 ರನ್, 129 ಎಸೆತ, 3 ಬೌಂಡರಿ, 3 ಸಿಕ್ಸರ್), ವಿಲ್ ಯಂಗ್ (71 ರನ್, 138 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 65.4 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟ್ ಆಯಿತು. ಭಾರತದ (Team India) ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್ ಸುಂದರ್ (18.4-2-81-4), ಆಕಾಶ್ ದೀಪ್ (5-0-22-1) ರನ್ ನೀಡಿ ವಿಕೆಟ್ ಪಡೆದಿದ್ದರು.
ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡವು ಶುಭಮನ್ ಗಿಲ್ (90 ರನ್, 146 ಎಸೆತ, 7 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ (60 ರನ್, 59 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 263 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್ಗಳಅ ಅತ್ಯಲ್ಪ ಮುನ್ನಡೆಯನ್ನು ಭಾರತ ತಂಡ (Team India) ಸಾಧಿಸಿತು. ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ (21.4-3-103-5), ಮ್ಯಟ್ ಹೆನ್ರಿ (8-1-26-1), ಗ್ಲೆನ್ ಫಿಲಿಪ್ಸ್ (20-0-84-1), ಇಶ್ ಸೋಧಿ (7-0-36-1) ರನ್ ನೀಡಿ ವಿಕೆಟ್ ಪಡೆದಿದ್ದರು.
ಪ್ರಥಮ ಇನಿಂಗ್ಸ್ನಲ್ಲಿನ 28 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ (New Zealand) ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್ಗಳು ವಿಲ್ ಯಂಗ್ (51 ರನ್, 100 ಎಸೆತ, 2 ಬೌಂಡರಿ, 1 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ ಎದುರಾಳಿಗಳನ್ನು ಮೂರನೇ ದಿನದಾಟದ ಆರಂಭದಲ್ಲೇ ಕಟ್ಟಿ ಹಾಕಿತು. ಈ ಮೂಲಕ ಭಾರತ ತಂಡವು 147 ರನ್ಗಳ ಗುರಿಯನ್ನು ಪಡೆಯಿತು. ಭಾರತದ (Team India) ಪರ ರವೀಂದ್ರ ಜಡೇಜಾ (13.5-3-55-5), ಆರ್. ಅಶ್ವಿನ್ (17-1-63-3), ವಾಷಿಂಗ್ಟನ್ ಸುಂದರ್ (10-0-30-1), ಆಕಾಶ್ದೀಪ್ (5-0-10-1) ರನ್ ನೀಡಿ ವಿಕೆಟ್ ಪಡೆದಿದ್ದರು.
ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯೊಂದಿಗೆ 147 ರನ್ಗಳ ಗುರಿ ಪಡೆದ ಭಾರತ ತಂಡದ (Team India) ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದ ಬೌಲರ್ಗಳು ರಿಷಭ್ ಪಂತ್ (64 ರನ್, 57 ಎಸೆತ, 9 ಬೌಂಡರಿ, 1 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ 21 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 25 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಭಾರತ ತಂಡವನ್ನು ತವರಿನಲ್ಲೇ ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ನ್ಯೂಜಿಲೆಂಡ್ ತಂಡ ಮಾಡಿದೆ.