ಬೆಂಗಳೂರು: ಜಗ್ಗೇಶ್ ನಟನೆಯ ಮಠ, ಎದ್ದೇಳು ಮಂಜುನಾಥ, ಎರಡನೇ ಸಲ ಸೇರಿದಂತೆ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿದ್ದ ರಾಜ್ಯಪ್ರಶಸ್ತಿ ವಿಜೇತ ಗುರುಪ್ರಸಾದ್ (Guruprasad) ಅವರು ನೇಣಿಗೆ ಶರಣಾಗಿದ್ದು, ಈ ಸುದ್ದಿ ಸ್ಯಾಂಡಲ್ವುಡ್ಅನ್ನು ಆಘಾತಕ್ಕೆ ದೂಡಿದೆ. ನಿರ್ದೇಶನ ಮಾತ್ರವಲ್ಲದೇ ನಟಿಸುವ ಮೂಲಕವೂ ಅಪಾರ ಖ್ಯಾತಿ ಪಡೆದಿದ್ದ ಗುರುಪ್ರಸಾದ್ (Guruprasad) ಅವರು ಸಾವಿಗೆ ಶರಣಾಗಿರುವುದು ಅನೇಕರನ್ನು ಆಘಾತವನ್ನುಂಟು ಮಾಡಿದೆ.
ಮೂಲತಃ ರಾಮನಗರದವರಾದ ಗುರುಪ್ರಸಾದ್ ಅವರು ನವೆಂಬರ್ 02, 1972ರಂದು ಜನಿಸಿದ್ದರು. ಆದರೆ, ಇದೀಗ ಅವರ ಜನ್ಮದಿನಕ್ಕೆ ಮುನ್ನವೇ ಆತ್ಮಹತ್ಯೆ ಶರಣಾಗುವ ಮೂಲಕ ಬದುಕಿನ ಆಟಕ್ಕೆ ಅಂತ್ಯ ಹಾಡಿದ್ದಾರೆ. ಕೆಲ ತಿಂಗಳ ಹಿಂದೆ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಇದೀಗ ಏಕಾ-ಏಕಿ ನೇಣಿಗೆ ಕೊರಳೊಡ್ಡಿದ್ದಾರೆ. ದಿಢೀರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಅನೇಕ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಮಾದನಾಯಕನಹಳ್ಳಿಯ ಟಾಟಾ ನ್ಯೂ ಹೆವನ್ – ರಿವಾ ಕ್ಲಬ್‌ಹೌಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಗುರುಪ್ರಸಾದ್ 9Guruprasad) ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುಪ್ರಸಾದ್ ಅವರು ತೀವ್ರ ಸಾಲಭಾದೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಕೆಲ ತಿಂಗಳ ಬಿಡುಗಡೆಯಾಗಿದ್ದ ಅವರ ನಿರ್ದೇಶನದ ರಂಗನಾಯಕ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿತ್ತು. ಈ ಸಿನಿಮಾ ಫ್ಲಾಪ್ ಆದ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಟಾಟಾ ನ್ಯೂ ಹಾವೆಲ್ ಅಪಾರ್ಟ್ಮೆಂಟ್ ನಲ್ಲಿ ಕಳೆದ ಎಂಟು ತಿಂಗಳಿಂದಲೂ ಗುರುಪ್ರಸಾದ್ (Guruprasad) ವಾಸವಿದ್ದರು, ಅದೇ ಮನೆಯಲ್ಲಿ ಈಗ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶಿಲಿಸಿದಾಗ ಗುರುಪ್ರಸಾದ್ ಶವ ಫ್ಯಾನಿಗೆ ನೇತಾಡುತ್ತಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಿದ್ದಾರೆ.
Darshan ನನ್ನ ಕಾಲನ್ನು ಹಿಡಿದು ತಮ್ಮ ಎದೆಗೆ ಒದ್ದಿಸಿಕೊಂಡಿದ್ದರು; ದಾಸನ ಕುರಿತು ಖ್ಯಾತ ನಟನ ಹೇಳಿಕೆ ವೈರಲ್