ಗಡಿ ಕಾಯಲಿದೆ ಮುಧೋಳ ನಾಯಿ

Mudhola
Published on

ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್​ನಲ್ಲಿರುವ ಬಿಎಸ್​ಎಫ್ ತಂಡ ಗಡಿ ಪಹರೆಗೆ ಕರ್ನಾಟಕದ ಮುಧೋಳ ಮತ್ತು ತಮಿಳುನಾಡಿನ ರಾಜಪಾಳಯಂ ತಳಿಯ ನಾಯಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಒಂದೊಮ್ಮೆ ನಾಯಿಗಳ ಮೇಲಿನ ಪ್ರಯೋಗ ಯಶಸ್ವಿಯಾದರೆ ಇನ್ನೂ ಕೆಲವು ತಳಿಯ ನಾಯಿಗಳನ್ನು ಗಡಿ ಪಹರೆ ಕೆಲಸಕ್ಕೆ ಬಳಸಲಾಗುವುದು. ಸದ್ಯ ಈ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅದು ಮುಗಿಯುತ್ತಿದ್ದಂತೆ ಪಹರೆಗೆ ಬಳಸಲಾಗುವುದು ಎಂದು ಬಿಎಸ್​ಎಫ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ಪಹರೆಗೆ ಭಾರತೀಯ ತಳಿಯ ನಾಯಿಗಳನ್ನು ಬಳಸಬೇಕೆಂಬ ನಿರ್ಧಾರವನ್ನು ಬಿಎಸ್​ಎಫ್ ಅಷ್ಟೇ ಅಲ್ಲ, ಭಾರತೀಯ ಸೇನೆ ಕೂಡ ಮಾಡಿಕೊಂಡಿದೆ. ಭಾರತೀಯ ಸೇನೆಯಲ್ಲೂ ಭಾರತೀಯ ತಳಿಯ ನಾಯಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ತರಬೇತಿ ನೀಡಲಾಗುತ್ತಿದೆ. ಅವುಗಳು ಶೀಘ್ರ ಸೇನಾ ಸೇವೆಗೆ ಸೇರ್ಪಡೆಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net