ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

as
Published on

ಚೆನ್ನೈ: ಹೆತ್ತವರಿಗೆ ಮಕ್ಕಳ ಬಗ್ಗೆ ಅದೆಷ್ಟು ರಕ್ಷಣಾ ಭಾವ ಇರುತ್ತದೆಯಲ್ಲವೇ. ಅದರಲ್ಲೂ ಹೆಣ್ಣು ಮಕ್ಕಳಾದರಂತೂ ಈ ಕಾಮುಕ ಜಗತ್ತಿನಿಂದ ಆಕೆಯನ್ನು ರಕ್ಷಿಸಿಕೊಳ್ಳಬೇಕು ಎನ್ನುವುದೇ ತಂದೆ ತಾಯಿಯ ಮೊದಲ ಆದ್ಯತೆಯಾಗಿರುತ್ತದೆ. ಆದರೆ ಈ ತಾಯಿಯ ಬಗ್ಗೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.

ತಮಿಳುನಾಡಿನ ಮಹಾಬಲಿಪುರಂ ಬಳಿಯ ಶೋಲಿಂಗನಲ್ಲೂರಿನ ಮಹಿಳೆ ಇತ್ತೀಚೆಗೆ ಗಂಡನಿಂದ ಬೇರ್ಪಟ್ಟಿದ್ದಳು. 15 ವರ್ಷದ ಮಗಳೊಂದಿಗೆ ಆಕೆ ಜೀವನ ಸಾಗಿಸುತ್ತಿದ್ದಳು. ಗಂಡನಿಂದ ಬೇರ್ಪಟ್ಟ ಮಹಿಳೆಗೆ ಬೇರೆ ಗಂಡಸರೊಂದಿಗೆ ಸಂಬಂಧ ಬೆಳೆದಿದೆ. ಇತ್ತೀಚೆಗೆ ವರ್ಣಕಾರನೊಬ್ಬನ ಜತೆ ಆಕೆಯ ಸ್ನೇಹ ಬೆಳೆದಿದ್ದು, ಅದು ಅಕ್ರಮ ಸಂಬಂಧವಾಗಿ ಬದಲಾಗಿದೆ. ಆಗಾಗ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದ ವರ್ಣಕಾರನ ಕಣ್ಣು ಮಹಿಳೆಯ ಮಗಳ ಮೇಲೂ ಬಿದ್ದಿದೆ.

ನಿನ್ನ ಮಗಳನ್ನು ನನ್ನ ಜತೆ ಮಲಗಿಸು ಎಂದು ಆತ ಮಹಿಳೆಯನ್ನು ಕೇಳಿದ್ದಾನೆ. ಇದಕ್ಕೆ ಮೊದಲು ತಾಯಿ ಒಪ್ಪಿಲ್ಲ. ನೀನು ಒಪ್ಪದಿದ್ದರೆ ನಿನ್ನನ್ನು ನಾನು ಬಿಟ್ಟು ಹೋಗುತ್ತೇನೆ, ಸಂಬಂಧ ನಿಲ್ಲಿಸಿಬಿಡುತ್ತೇನೆ ಎಂದು ಆತ ಅವಳಿಗೆ ಹೆದರಿಸಿದ್ದಾನೆ. ಸಂಬಂಧ ದೂರಾಗುತ್ತದೆ ಎನ್ನುವ ಭಯದಿಂದ ಆಕೆ ಮಗಳನ್ನು ಅವನೊಂದಿಗೆ ಮಲಗಿಸಲು ಒಪ್ಪಿದ್ದಾಳೆ. ಆದರೆ ಆಗ ಮಗಳು ಅಮ್ಮನ ವಿರುದ್ಧ ತಿರುಗಿಬಿದ್ದಿದ್ದಾಳೆ. ನನಗೆ ಈ ರೀತಿ ಮೋಸ ಮಾಡಬೇಡ ಎಂದು ಕೇಳಿಕೊಂಡಿದ್ದಾಳೆ. ಆದರೆ ಅದನ್ನು ಕೇಳದ ತಾಯಿ ತನ್ನ ಪ್ರಿಯತಮನನ್ನು ಮತ್ತು ಮಗಳನ್ನು ಕೋಣೆಗೆ ಹಾಕಿ ಬಾಗಿಲು ಹಾಕಿದ್ದಾಳೆ.

ಇದೇ ರೀತಿಯಲ್ಲಿ ಹಲವಾರು ಬಾರಿ ಆತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ಮಧ್ಯೆ ಬಾಲಕಿ ಒಮ್ಮೆ ತನ್ನ ಸೋದರ ಮಾವನ ಮನೆಗೆ ತೆರಳಿದ್ದಾಳೆ. ತನ್ನ ಸಹೋದರಿಯ ಮಗಳ ದೇಹದಲ್ಲಿ ಬದಲಾವಣೆಯಾಗುತ್ತಿರುವುದನ್ನು ಗಮನಿಸಿದ ಸೋದರ ಮಾವ ಬಾಲಕಿಯನ್ನು ಪ್ರಶ್ನಿಸಿದ್ದಾನೆ. ಆಗ ಬಾಲಕಿ ನೋವಿನಿಂದ ಎಲ್ಲ ಕಥೆಯನ್ನು ತಿಳಿಸಿದ್ದಾಳೆ. ತಕ್ಷಣ ಆತ ಮಹಿಳೆಯ ಮನೆಗೆ ಬಂದಿದ್ದಾನೆ. ಅಷ್ಟರಲ್ಲಾಗಲೇ ಆಕೆ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ. ಅದಾದ ನಂತರ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಆತ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೀಗ ಬಾಲಕಿ ತನ್ನ 15ನೇ ವಯಸ್ಸಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net