ಕೆಸರು ಗದ್ದೆಯಂತಾದ ರಸ್ತೆ

ಕೆಸರು ಗದ್ದೆಯಂತಾದ ರಸ್ತೆ
Published on

ಹಂಪಾಪುರ: ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿಯ ಹಂಪಾಪುರ ಮಾರ್ಗದ ಜಿನಹಳ್ಳಿ, ಮಾಲಾರದಹುಂಡಿ, ಕಂಚಮಳ್ಳಿ, ಇರೇನಂದಿ, ಚಮಹಳ್ಳಿ, ಹಾತ್ವಳು ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಈ ರಸ್ತೆಗಳು ಡಾಂಬಾರು ಕಾಣದೆ ಹತ್ತು ವರ್ಷ ಕಳೆದಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದೆ ನಿರ್ಲಕ್ಷೃವಹಿಸಿದ್ದಾರೆ. ಈ ರಸ್ತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ನೂರಾರು ಜನ ಓಡಾಡುತ್ತಿದ್ದು, ತಿರುಗಾಡಲು ಪರದಾಡುವಂತಾಗಿದೆ.

ಹುಲ್ಲಹಳ್ಳಿಯಿಂದ ನಂಜನಗೂಡಿಗೆ ತೆರಳುವ ರಸ್ತೆ ಕೆಸರುಮಯವಾಗಿದ್ದು, ಸಂಚಾರ ಕಷ್ಟ ಸಾಧ್ಯವಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net