ದಯಮಾಡಿ ಇಂತಹ ಆರೋಪ ತೇಜೋವಧೆ ಮಾಡಬೇಡಿ: ಮುಡಾ ಅಧ್ಯಕ್ಷ ಕೆ. ಮರೀಗೌಡ ಬೇಸರ

marigowda feels sad
Published on

ಮೈಸೂರು: ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷರಾದ ಕೆ. ಮರೀಗೌಡ (Muda President Marigowda), ನಾನು ಯಾರಿಗೂ ಸಹ ದ್ರೋಹ ಮಾಡಿಲ್ಲ. ನನ್ನ ಮನೆ ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದ್ರೋಹ ಬಗೆದಿಲ್ಲ ಎಂದು ಹೇಳಿದರು.

"ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ನಾನು ಅಧ್ಯಕ್ಷ ಆದ ಮೇಲೆ ಸಿದ್ದರಾಮಯ್ಯ ಅವರಿಗೆ ಇಂತಹ ಸ್ಥಿತಿ ಬಂತು ಎಂದು ಹೇಳುತ್ತಿದ್ದಾರೆ. ದಯಮಾಡಿ ಇಂತಹ ಆರೋಪ ತೆಜೋವಧೆ ಮಾಡಬೇಡಿ. ಹರೀಶ್‌ಗೌಡ, ಬಿಜೆಪಿ ಶಾಸಕ ಶ್ರೀವತ್ಸ ಅವರು ಪತ್ರ ಕೊಟ್ಟಿದ್ದರು. 50:50 ಅನುಪಾತ ಮಾಡದಂತೆ ಶಾಸಕರು ಮನವಿ ಮಾಡಿದರು. ನಾನು ಕೂಡ ಆಯುಕ್ತರಿಗೆ 50ರ ಅನುಪಾತ ಮಾಡದಂತೆ ಸೂಚಿಸಿದ್ದೆ‌" ಎಂದು ತಿಳಿಸಿದರು.

"ಇಷ್ಟಾದರೂ ಸಹ ಆಯುಕ್ತರು ಯಾರ ಮಾತು ಕೇಳದೆ 50:50 ಅನುಪಾತ ಮಾಡಿದರು. ನನಗೆ 73 ವರ್ಷ, ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನ್ನ ಪಕ್ಷದಿಂದಲೇ ನನಗೆ ನಿರಂತರ ತೇಜೋವಧೆ ಆಗ್ತಿದೆ. ಬೇರೆ ಪಕ್ಷದವರು ನನ್ನ ವಿರುದ್ಧ ಮಾತಾಡ್ತಿಲ್ಲ. ಆದ್ರೆ, ನಮ್ಮವರೇ ನನ್ನ ವಿರುದ್ಧ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇಂತವರ ವಿರುದ್ಧ ಕ್ರಮ ಕೈಗೊಳ್ಳಿ. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದ್ದಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net