

ಮಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಶನಿವಾರ ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಧೋನಿ ಅವರನ್ನು ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಸ್ವಾಗತಿಸಿದರು.
ಧೋನಿ ಅವರ ಸ್ನೇಹಿತನ ತಂದೆಯ 'ಆತ್ಮಕಥೆ' ಬಿಡುಗಡೆ ಕಾರ್ಯಕ್ರಮ ಕಾಸರಗೋಡಿನಲ್ಲಿ ಇಂದು ಸಂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಧೋನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳು ಅಭಿಮಾನಿಗಳು ಮುಗಿಬಿದ್ದರು. ಕಾಸರಗೋಡಿನತ್ತ ಎಂ.ಎಸ್.ಧೋನಿ ಪ್ರಯಾಣ ಬೆಳೆಸಿದರು.