ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

ಕುಣಿಗಲ್​: ಇತಿಹಾಸ ಪ್ರಸಿದ್ಧ ಕುಣಿಗಲ್​ ಸ್ಟಡ್​ ಫಾರ್ಮ್​ನಲ್ಲಿ ದುರಂತವೊಂದು ಸಂಭವಿಸಿದೆ. ಹೆಜ್ಜೇನು ದಾಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ವಿದೇಶಿ ತಳಿಯ 2 ಗಂಡು ಕುದುರೆಗಳು ಮೃತಪಟ್ಟಿವೆ. ಈ ಕುದುರೆಗಳು ಹಲವು ಪ್ರತಿಷ್ಠಿತ ರೇಸ್​ಗಳಲ್ಲಿ ಜಯಶಾಲಿಗಳಾಗಿ ಹೊರಹೊಮ್ಮಿ ಕೀರ್ತಿ ಜತೆಗೆ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದವು.

ಹತ್ತು ವರ್ಷದ ಸನಸ್​ ಪರ್​ ಅಕ್ಚಮ್​ ಹಾಗೂ 15 ವರ್ಷದ ಏರ್​ ಸಫೋರ್ಟ್​ ಹೆಸರಿನ ಕುದುರೆಗಳನ್ನು ಬುಧವಾರ ಮೇಯಲು ಬಿಡಲಾಗಿತ್ತು. ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿವೆ. ದಾಳಿ ಮಾಡಿದ ನಂತರ ಕುದುರೆಗಳು ಚೀರಿಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ ಕಾರ್ಮಿಕರು ವೈದ್ಯರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವೈದ್ಯರ ತಂಡ ಕುದುರೆಗಳಿಗೆ ಚಿಕಿತ್ಸೆ ನೀಡಿದರೂ ಬುಧವಾರ ರಾತ್ರಿ ಸನಸ್​ ಪರ್​ ಅಕ್ಚಮ್​ ಹಾಗೂ ಗುರುವಾರ ಬೆಳಗ್ಗೆ ಏರ್​ ಸಫೋರ್ಟ್​ ಕುದುರೆ ಮೃತಪಟ್ಟಿದೆ. ಇವರೆಡೂ ಐರ್ಲೆಂಡ್​ ಹಾಗೂ ಅಮೆರಿಕ ಮೂಲದವು.

ಕುದುರೆಗಳ ಸಾಧನೆ: ಅಮೆರಿಕದ ಏರ್​ ಸಫೋರ್ಟ್​ ಕುದುರೆ ವರ್ಜಿನಿಯಾ ಡರ್ಬಿಯಲ್ಲಿ ಭಾಗಿಯಾಗಿದೆ. ಪಿಲ್ಗ್​ರಮಾ ಸ್ಟೇಕ್ಸ್​, ಟ್ರಾನ್ಸ್ಲೇನಿಯಾ ಸ್ಟೇಕ್ಸ್​, ಎರಡನೇ ಯುನೈಟೆಡ್​ ನೇಷನ್ಸ್​ ಸ್ಟೇಕ್ಸ್​, ಮೂರನೇ ಅಮೆರಿಕನ್​ ಟರ್ಫ್​ ಸ್ಟೇಕ್ಸ್​, ಎರಡನೇ ಹಿಲ್​ ಪ್ರಿನ್ಸ್​ ಸ್ಟೇಕ್ಸ್​ ರೇಸ್​ನಲ್ಲಿ ಜಯಗಳಿಸಿ ಕೋಟ್ಯಂತರ ರೂಪಾಯಿ ಸಂಪಾದಿಸಿದೆ ಎನ್ನಲಾಗಿದೆ. ಇನ್ನು ಐರ್ಲೆಂಡ್​ ದೇಶದ ಸನಸ್​ ಪರ್​ ಅಕ್ಚಮ್​ ಕುದುರೆ 5 ಸ್ಟಾರ್​ ಕುದುರೆ ರೇಸ್​ನಲ್ಲಿ ಮೂರು ಸಲ ಗೆದ್ದು ಲಾಭ ತಂದು ಕೊಟ್ಟಿದೆ.

ಕುದುರೆ ತಳಿ ಉತ್ಪಾದನೆ: ರೇಸಿನಲ್ಲಿ ಉತ್ತಮ ಸಾಧನೆ ಮಾಡಿರುವ ಈ ಎರಡೂ ಕುದುರೆಗಳನ್ನು ಆರು ವರ್ಷದ ಹಿಂದೆ ಯುಆರ್​ಬಿಬಿ(United Racing and Bloodstock Breeders) ತಲಾ ಒಂದು ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ಕುದುರೆಗಳಿಂದ ತಳಿಗಳನ್ನು ಉತ್ಪಾದಿಸಲಾಗುತ್ತಿತ್ತು. ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಂದ ಬಿಲ್ಡರ್ಸ್​ಗಳು ಬಂದು ಲಕ್ಷಾಂತರ ರೂಪಾಯಿಗೆ ಕುದುರೆಗಳನ್ನು ಖರೀದಿ ಮಾಡುತ್ತಿದ್ದರು.

ಮಂಗಳಮುಖಿಯಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡ ಬಂಟ್ವಾಳ ಮೂಲದ ಮುಸ್ಲಿಂ ಯುವಕ! ಆಡಿಯೋ ವೈರಲ್​ ಬೆನ್ನಲ್ಲೇ ಆಘಾತಕಾರಿ ವಿಷಯ ಚರ್ಚೆ

ಏರ್​ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಮುಂಬೈ ನಿವಾಸಿ ಬೆಂಗಳೂರಿನಲ್ಲಿ ಬಂಧನ!

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…