'ಗ್ಲಾಮರ್ ಪಾತ್ರಗಳಲ್ಲಿ ನಟಿಸಲು ಆಸಕ್ತಿಯಿಲ್ಲ': ಹೀಗಂದಿದ್ದೇಕೆ ಮೃಣಾಲ್ ಠಾಕೂರ್?

mrunal
Published on

ಮುಂಬೈ: ದಕ್ಷಿಣ ಮತ್ತು ಉತ್ತರದ ಸಿನಿ ಜಗತ್ತಿನಲ್ಲಿ ಹೆಸರು ಮಾಡಿರುವ ಮೃಣಾಲ್ ಠಾಕೂರ್ 'ಗ್ಲಾಮರ್ ಪಾತ್ರಗಳಿಗೆ ಕೆಲಸ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

''ಬಾಲಿವುಡ್ ನಲ್ಲಿ ನನಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಅವೆಲ್ಲ ಗ್ಲಾಮರ್​ ಪಾತ್ರಗಳು. ದಕ್ಷಿಣದಲ್ಲಿ ಬರುತ್ತಿರುವ ಒಳ್ಳೆಯ ಪಾತ್ರಗಳು ಅಲ್ಲಿ ಬರುತ್ತಿಲ್ಲ. ಹೀಗಾಗಿ ಬಾಲಿವುಡ್​ನಲ್ಲಿ ಅವುಗಳಲ್ಲಿ ನಟಿಸಲು ನನಗೆ ಆಸಕ್ತಿ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸೀತಾರಾಮಂ' ಚಿತ್ರದ ಮೂಲಕ ದಕ್ಷಿಣ ಭಾರತದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದ ಮೃಣಾಲ್ ಠಾಕುರ್ ಸದ್ಯ ಬೆರಳೆಣಿಕೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕಹಿ ಅನುಭವಗಳನ್ನು ನೆನಪಿಸಿಕೊಂಡರು.

ನಾನು ನನ್ನನ್ನು ಸಾಬೀತುಪಡಿಸುವ ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ. ಅಮ್ಮ, ಅಕ್ಕನ ಪಾತ್ರ ಮಾಡಿದರೂ ಭಯ ನನಗಿಲ್ಲ. ವರ್ಷಕ್ಕೆ ಐದು ಚಿತ್ರಗಳಲ್ಲಿ ನಟಿಸುವ ಗುರಿ ನನಗಿಲ್ಲ. ಒಂದೇ ಒಂದು ಸಿನಿಮಾ ಮಾಡಿದರೂ ಪ್ರೇಕ್ಷಕರ ಮನಸೂರೆಗೊಳ್ಳಬೇಕು. ನಾನು ಇಂಡಸ್ಟ್ರಿಗೆ ಸೇರಿದ ಆರಂಭದ ದಿನಗಳಲ್ಲಿ ನನ್ನ ಮೈಕಟ್ಟು ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದರು. ಗ್ಲಾಮರ್ ರೋಲ್‌ಗಳು ನನಗೆ ನಿಷ್ಪ್ರಯೋಜಕ ಎಂದಿದ್ದರು. ಛಾಯಾಗ್ರಾಹಕ ನನ್ನನ್ನು ಸಿನಿಮಾದ ಆಡಿಷನ್‌ನಲ್ಲಿ ನೋಡಿದಾಗ ಈ ಹಳ್ಳಿ ಹುಡುಗಿ ಯಾರು ಎಂದು ಕೇಳಿದ್ದರು. ನಾನು ಇಂತಹ ಅನೇಕ ರೀತಿಯ ಕಹಿ ಅನುಭವಗಳನ್ನು ಎದುರಿಸಿದ್ದೇನೆ ಎಂದು ಮೃಣಾಲ್ ತಿಳಿಸಿದರು.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ 'ಹಾಯ್ ನಾನ್ನ' ಚಿತ್ರದ ಮೂಲಕ ಯಶಸ್ಸು ಮುಡಿಗೇರಿಸಿಕೊಂಡಿರುವ ಮೃಣಾಲ್ ಸದ್ಯ 'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪರಶುರಾಮ್ ನಿರ್ದೇಶನದ ಈ ಚಿತ್ರದ ನಾಯಕ ವಿಜಯ್ ದೇವರಕೊಂಡ. 'ಗೀತ ಗೋವಿಂದಂ' ನಂತರ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಬರುತ್ತಿರುವುದರಿಂದ ಅದರ ಬಗ್ಗೆ ನಿರೀಕ್ಷೆ ಮೂಡಿವೆ. ಇದು ಏಪ್ರಿಲ್ 5 ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಯಾದ ಹಾಡುಗಳು ಜನಪ್ರಿಯತೆಯನ್ನು ಗಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net