More

    ರಣಜಿಯಲ್ಲಿ ಪೃಥ್ವಿ ಶಾ ಸದ್ದು.. ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಲು ಹರಸಾಹಸ!

    ನವದೆಹಲಿ: 24ರ ಹರೆಯದ ಪೃಥ್ವಿಶಾ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಗಾಯಗಳಿಂದಾಗಿ ಪಾಮ್ ನಲ್ಲಿಲ್ಲದೆ ತೊಂದರೆ ಅನುಭವಿಸಿದ ನಂತರ, ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಣಜಿಯಲ್ಲಿ ಮುಂಬೈ ಪರ ಬೃಹತ್ ಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿ ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..

    ಪೃಥ್ವಿಶಾ ಗ್ರೂಪ್ ಬಿ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ 185 ಎಸೆತಗಳಲ್ಲಿ 159 ರನ್ ಗಳಿಸಿದ್ದಾರೆ. ಮೊದಲ ದಿನ ಭೋಜನ ವಿರಾಮದ ವೇಳೆಗೆ ಎರಡು ಶತಕ ಸಿಡಿಸಿದ ಮೊದಲ ಕ್ರಿಕೆಟಿಗರಾದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಅಸ್ಸಾಂ ವಿರುದ್ಧ 379 ಎಸೆತಗಳಲ್ಲಿ 383 ರನ್ ಗಳಿಸಿದ ಪೃದ್ವಿ, ರಣಜಿ ಟ್ರೋಫಿಯಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದರು. ಆಗಲೂ ಮೊದಲ ದಿನ ಭೋಜನ ವಿರಾಮದ ವೇಳೆಗೆ ಶತಕ ಬಾರಿಸಿದ್ದರು.

    ತಂಡ ಸೇರಲು ನಾವೂ ರೆಡಿ: .
    ಹಿರಿಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಜೊತೆಗೆ ಹೈದರಾಬಾದ್‌ನ ಯುವ ಆಟಗಾರ ತಿಲಕ್ ವರ್ಮಾ ಕೂಡ ಭಾರತ ತಂಡವನ್ನು ಮತ್ತೆ ಸೇರಲು ತಯಾರಿ ನಡೆಸಿದ್ದಾರೆ. ಕಳೆದ ತಿಂಗಳು ರಣಜಿ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ್ದ ಪೂಜಾರ (110, 230 ಎಸೆತಗಳಲ್ಲಿ 9.4) ಮತ್ತೊಂದು ಶತಕ ತಮ್ಮ ಖಾತೆಯಲ್ಲಿ ಸೇರಿದ್ದರು. ರಾಜಸ್ಥಾನ ವಿರುದ್ಧದ ಗ್ರೂಪ್-ಎ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಗಾಲ್ಯಾಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹೈದರಾಬಾದ್ ಆಟಗಾರ ತಿಲಕ್ ವರ್ಮಾ (101) ಕೂಡ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಉಳಿದ ಮೂರು ಟೆಸ್ಟ್‌ಗಳಿಗೆ ತಂಡವನ್ನು ಘೋಷಿಸಬೇಕಾದಾಗ ಇವರು ಪಾಮ್​ನಲ್ಲಿರುವುದನ್ನು ಪರಿಗಣಿಸಬೇಕಾಗುತ್ತದೆ. ವಿರಾಟ್ ಮತ್ತು ಶ್ರೇಯಸ್ ಲಭ್ಯರಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಆಯ್ಕೆದಾರರು ಇವರತ್ತ ಗಮನ ಹರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    EPFO: ಉದ್ಯೋಗಿಗಳ ಠೇವಣಿ ಮೇಲಿನ ಬಡ್ಡಿ ದರ ಫಿಕ್ಸ್​: ಶೇ.8.25​ ನಿಗದಿಪಡಿಸಿದ ಸಿಬಿಇಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts