ಯಾವ ಪಾರ್ಟಿಯಾದ್ರೂ ಸರಿ, ದಲಿತ ಸಿಎಂ ಆಗ್ಬೇಕು; ಬಿಜೆಪಿ ಸಂಸದ ಜಿಗಜಿಣಗಿ

1270660
Published on

ವಿಜಯಪುರ: ಯಾವ ಸರ್ಕಾರವಾದ್ರೂ ಬರಲಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನೂರಕ್ಕೆ ನೂರು ಪರ್ಸೆಂಟ್ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎನ್ನುವ ಬೇಡಿಕೆ ನನ್ನದು. ಯಾವ ಪಾರ್ಟಿಯಿಂದ ಆದರೂ ಸರಿ ದಲಿತ ಸಿಎಂ ಆಗಬೇಕು. ನಾನು ಆ ಪಾರ್ಟಿ, ಈ ಪಾರ್ಟಿ ಎಂದು ಹೇಳುವುದಿಲ್ಲ. ನನಗೆ ದಲಿತ ಸಿಎಂ ಆಗುವಂತೆ ಪಾರ್ಟಿ ಸೂಚಿಸಿದರೆ ಅದರಂತೆ ನಡೆಯುವೆ. ಜೀವನದಲ್ಲಿ ನಾನು ಯಾವುದಕ್ಕೂ ಆಸೆ ಪಟ್ಟಿಲ್ಲ, ಸಾಮಾನ್ಯ ಜನರ ಜತೆ ಇರುತ್ತೇನೆ ಎಂದು ಸಿಎಂ ಆಗುವ ಕನಸನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಸಚಿವ ಗೋವಿಂದ ಕಾರಜೋಳ ನನ್ನ ಕುಲಬಾಂಧವ. ಮುಂದಿನ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದಿಂದ ನಿಲ್ಲುತ್ತಾರೋ, ಅವರ ಮಗನನ್ನು ನಿಲ್ಲಿಸುತ್ತಾರೋ ಅವರಿಗೆ ಬಿಟ್ಟ ವಿಚಾರ. ಹೈಕಮಾಂಡ್​ ರಾಜ್ಯ ರಾಜಕಾರಣಕ್ಕೆ ಹೋಗಿ ಎಂದರೆ ನಾನು ಸಿದ್ಧ ಎಂದು ಇದೇ ವೇಳೆ ತಿಳಿಸಿದರು.

ಯತ್ನಾಳ್ ವಿರುದ್ದ ವಾಗ್ದಾಳಿ: ಅವರು ದುಡ್ಡು ತಿಂದರು, ಇವರು ದುಡ್ಡು ತಿಂದರು ಎಂದು ಸುಮ್ಮನೆ ಭಾಷಣ ಮಾಡುವುದಲ್ಲ. ಯಾರ್ಯಾರು ರೊಕ್ಕ ಹೊಡೀತಾರೆ ಎನ್ನುವುದು ನನಗೂ ಗೊತ್ತು. ರೊಕ್ಕ ಮುಂದಿಟ್ಟಾಗ ರೊಕ್ಕಾ ತಗೀ ಎಂದು ಹೇಳುವ ಗಂಡಸ್ತನ ಇರಬೇಕು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಪರೋಕ್ಷವಾಗಿ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net