ದಕ್ಷಿಣ ಭಾರತದ ಸಿನಿಮಾಗಳಿಂದ ಬಾಲಿವುಡ್​ ನಟರಿಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ: ರಾಮ್​ಗೋಪಾಲ್​ ವರ್ಮಾ

verma
Published on

ಮುಂಬೈ: ದಕ್ಷಿಣ ಭಾರತದ ಸಿನಿಮಾಗಳ ಗೆಲುವು ಬಾಲಿವುಡ್​ ಅನ್ನು ಕಂಗೆಡುವಂತೆ ಮಾಡಿರುವುದು ಅವರಲ್ಲಿ ಅಸುರಕ್ಷಿತ ಭಾವನೆ ಕಾಡುವಂತೆ ಮಾಡಿದೆ ಎಂದು ನಿದೇರ್ಶಕ ರಾಮ್​ಗೋಪಾಲ್​ ವರ್ಮಾ ಹೇಳಿದ್ದಾರೆ.

ಹಿಂದಿ ಭಾಷೆ ಕುರಿತ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ ವಿವಾದಕ್ಕೆ ಗುರಿಯಾದ ಬಾಲಿವುಡ್​ ನಟ ಅಜಯ್​ ದೇವಗನ್​ ನಂತರ ತಾವೇ ಟ್ವೀಟ್​ ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ ಎಂದು ವಿವಾದಕ್ಕೆ ತೆರೆ ಎಳೆದಿದ್ದರು.

ಇದೀಗ ಈ ರೀತಿಯ ಭಾವನೆ ಬಾಲಿವುಡ್ ನಟರನ್ನು ಕಂಗೆಡುವಂತೆ ಮಾಡಿದೆ ಎಂದು ರಾಮ್​ಗೋಪಾಲ್​ ವರ್ಮಾ ಹೇಳಿದ್ದಾರೆ. ಇನ್ನು ಕೆಜಿಎಫ್​ -2 ಭರ್ಜರಿ ಯಶಸ್ಸು ಬಾಲಿವುಡ್​ ನಟರನ್ನು ಅಸುರಕ್ಷಿತ ಹಾಗೂ ಅಸೂಯೆ ಮೂಡಿಸಿದೆ ಎಂದು ಹೇಳಿಕೆ ನೀಡಿದ್ದರು.

ತಮ್ಮ ಸಿನಿಮಾ ಸೋಲುತ್ತಿದೆ ಎಂಬ ಭಯದಿಂದಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಯಲ್ಲಿ ಏಕೆ ಡಬ್​ ಮಾಡುತ್ತೀರಿ ಎಂದು ಹೇಳುವ ಮೂಲಕ ತಮ್ಮ ಅಸುರಕ್ಷಿತ ಭಾವನೆಯನ್ನು ಹೊರಹಾಕಿದ್ದಾರೆ ಎಂದು ವರ್ಮಾ ಹೇಳಿಕೊಂಡಿದ್ದಾರೆ.

ಸದ್ಯ ಹಿಂದಿ ರಾಷ್ಟ್ರೀಯ ಭಾಷೆ ಕುರಿತು ಕಿಚ್ಚ ಸುದೀಪ್​ ಮತ್ತು ಅಜಯ್​ ದೇವಗನ್​ ನಡುವೆ ಟ್ವೀಟ್​ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net