More

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

    ಹೈದರಾಬಾದ್: ಒಂದು ಕಾಲದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ರೆಂಡ್ ಸೆಟ್ಟರ್ ಏನಿಸಿಕೊಂಡಿದ್ದರು. ಅವರ ಸಿನಿಮಾಗಳನ್ನು ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರು ನೋಡುವಂತಹ ಸಿನಿಮಾಗಳಾಗಿದ್ದವು. ಅದರಲ್ಲಿಯೂ, ಕ್ರೈಂ ಥ್ರಿಲ್ಲರ್ ಚಿತ್ರಗಳನ್ನು ಇಷ್ಟ ಪಡುವವರಿಗೆ ವರ್ಮಾ ಫೇವರೆಟ್ ಆಗಿದ್ದರು. 7 ಡಿಸೆಂಬರ್ 1990 ರಲ್ಲಿ ರಿಲೀಸ್ ಆದ ತೆಲುಗಿನ ಸೂಪರ್ ಹಿಟ್, ನಟ ನಾಗಾರ್ಜುನ ಸಿನಿಮಾ ಶಿವಯಾರಿಗೆ ತಾನೆ ಗೊತ್ತಿಲ್ಲ. ರಾಮ್ ಗೋಪಾಲ್ ವರ್ಮಾ ಎಂಬ ಹೆಸರು ತೆಗೆದರೆ ಮೊದಲು ನೆನಪಾಗುವುದು ಈ ಸಿನಿಮಾನೆ. ಇನ್ನು, ವರ್ಮಾರ ಸಿನಿಮಾಗಳನ್ನು ರಿಲೀಸ್ ಮಾಡಲು ಅಂದು ತೆಲುಗು ರಾಜ್ಯಗಳಲ್ಲಿ ಚಿತ್ರಮಂದಿರಗಳು ಕಾದು ಕುಳಿತಿದ್ದವು. ಆದರೆ, ಅಂದಿನ ಪರಿಸ್ಥಿತಿ ಇಂದು ಇಲ್ಲ. ಹೌದು, ಆಗ ಟ್ರೆಂಡ್ ಸೆಟ್ಟರ್ ಎಂದು ಕರೆಸಿಕೊಂಡ ವರ್ಮಾ ಕೆಲ ವರ್ಷಗಳಿಂದ ವಿವಾದಾತ್ಮಕ ನಿರ್ದೇಶಕರೆಂದೇ ಫೇಮಸ್ ಆಗಿದ್ದಾರೆ. ಇದಕ್ಕೆ ಕಾರಣ, ಒಂದು ಕಡೆ ಈ ನಿರ್ದೇಶಕ ಹಲವು ವಿಚಾರಗಳಿಗೆ ಸಂಬಂಧ ಪಟ್ಟ ಹಾಗೆ ಕೊಟ್ಟ ಹೇಳಿಕೆಗಳಾದರೆ, ಮತ್ತೊಂದು ಕಡೆ ಇತ್ತೀಚಿನ ವರ್ಷಗಳಲ್ಲಿ ಅವರು ಮಾಡಿರುವುದೆಲ್ಲ ಕೇವಲ ಸಿ ಗ್ರೇಡ್ ಹಾಗೂ ವಯಸ್ಕರ ಚಿತ್ರ ಸಿನಿಮಾಗಳು. ಅಂದಹಾಗೆ, ಕಳೆದ ಎರಡು ಮೂರು ವರ್ಷಗಳಿಂದಲಂತೂ ವರ್ಮಾ ಅಂದರೆ ಪೋರ್ನ್ ನಟಿಯರೊಟ್ಟಿಗೆ ಚಿತ್ರ ಮಾಡಿ, ತಮ್ಮದೇ ವೆಬ್‌ಸೈಟ್‌ನಲ್ಲಿ ರಿಲೀಸ್ ಮಾಡಿ ಹಣ ಗಳಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಬಂದು ಬಿಟ್ಟಿದೆ.
    ಅಂತೆಯೇ, ಇದೀಗ ವರ್ಮಾ ಅವರ ಡೇಂಜರಸ್ಎಂಬ ಟೈಟಲ್ ಹಾಗೂ ‘ಮಾ ಇಷ್ಟಂ’ ಎಂಬ ಕ್ಯಾಪ್ಷನ್ ಹೊಂದಿರುವ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆಗಳನ್ನು ನಡೆಸಿರುವ ನಿರ್ದೇಶಕ ಆರ್.ಜಿ.ವಿ ಅವರು ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ನಗರಗಳಲ್ಲಿ ಪ್ರಚಾರವನ್ನು ಮಾಡಿದ್ದಾರೆ. ಇನ್ನು, ಸಿನಿಮಾ ಏಪ್ರಿಲ್ 08 ಅಂದರೆ ಇಂದು ತೆರೆಗಪ್ಪಳಿಸಬೇಕಿತ್ತು. ಆದರೆ, ಸದ್ಯ ಈ ಸಿನಿಮಾದ ರಿಲೀಸ್ ಮುಂದೂಡಲ್ಪಟ್ಟಿದೆ. ಇದಕ್ಕೆ, ಕಾರಣ ಏನು ಅಂತೀರಾ…? ನಿರ್ದೇಶಕ ವರ್ಮಾ ಅವರ ಈ ಡೇಂಜರಸ್ಎಂಬ ಸಿನಿಮಾವನ್ನು ಚಿತ್ರಮಂದಿರಗಳ ಮಾಲೀಕರು ಪ್ರದರ್ಶನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ, ಸಿನಿಮಾದ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗಾದರೆ, ಚಿತ್ರಮಂದಿರದ ಮಾಲೀಕರು ಯಾಕೆ ಈ ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ ಎಂದಿದ್ದಾರೆ? ಈ ಪ್ರಶ್ನೆಗೆ ಉತ್ತರವೇ, ಈ ಚಿತ್ರದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ, ಅವರಿಗೆ ವಿಲನ್‌ಗಳಿಂದ ಸಮಸ್ಯೆ ಆಗುವ ಮತ್ತು ವಿಲನ್‌ಗಳನ್ನು ಎದುರಿಸಿ ಅವರ ಪ್ರೀತಿಯನ್ನು ಉಳಿಸಿಕೊಳ್ಳುವ ಕಥೆ

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! 'ಡೇಂಜರಸ್'ಗೆ ನೋ ರಿಲೀಸ್; ಕಾರಣ?

    ಇನ್ನು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರ ನಡುವೆ ಹಲವು ಶೃಂಗಾರದ ದೃಶ್ಯಗಳು ಇವೆ. ಇದೇ ಕಾರಣಕ್ಕೆ, ಸಿನಿಮಾ ಪ್ರದರ್ಶಕರು ಈ ಚಿತ್ರದ ವಿರುದ್ಧವಾಗಿದ್ದಾರೆ. ಹೀಗಿದ್ದರೂ, ವರ್ಮಾ ಅವರು ಮಾತ್ರ, ”ಸುಪ್ರಿಂಕೋರ್ಟ್‌ ನಲ್ಲಿಯೇ ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಬಂದ ಮೇಲೆಯೇ ಲೆಸ್ಬಿಯನ್ಸ್ ಕುರಿತ ಸಿನಿಮಾ ಮಾಡುವ ಆಲೋಚನೆ ನನಗೆ ಬಂದಿತು. ನನಗಿಂತಲೂ ಮುಂಚೆ ಹಲವು ನಿರ್ದೇಶಕರು ಲೆಸ್ಬಿಯನ್ಸ್‌ಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ಆದರೆ, ಆ ಸಿನಿಮಾಗಳಲ್ಲಿ ಸಲಿಂಗ ಪ್ರೇಮಿಗಳನ್ನು ಶಕ್ತಿಹೀನರೆಂಬಂತೆ, ಪಾಪದವರೆಂಬಂತೆಯೂ ಬಿಂಬಿಸಲಾಗಿದೆ. ಆದರೆ, ನಾನು ಮಾತ್ರ ಲೆಸ್ಬಿಯನ್ಸ್‌ಗಳನ್ನು ಫವರ್‌ಫುಲ್ ವ್ಯಕ್ತಿಗಳಾಗಿ ತೋರಿಸಿ ಜತೆಗೆ ಸಮಾಜ ಲೆಸ್ಬಿಯನ್ಸ್‌ಗಳ ಕುರಿತು ಹೆಚ್ಚು ಸಹಿಷ್ಣುವಾಗಲಿ ಎಂದು ಒಂದು ಮಸಾಲೆ ಸಿನಿಮಾದಲ್ಲಿ ಇರಬಹುದಾದ ಕಥೆಯನ್ನೇ ಇಟ್ಟುಕೊಂಡು, ನಾಯಕನಾಯಕಿಯ ಬದಲಿಗೆ ನಾಯಕಿನಾಯಕಿ ಇಟ್ಟುಕೊಂಡು ತೆಗೆದಿರುವ ಸಿನಿಮಾ ಇದು”, ಎಂದು ಒಂದು ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.
    ಇನ್ನು, ತಮ್ಮ ಮಾತನ್ನು ಮುಂದುವರಿಸಿದ ವರ್ಮಾ ಅವರು, ”ಚಿತ್ರಮಂದಿರಗಳ ಮಾಲೀಕರು ನನ್ನ ಸಿನಿಮಾವನ್ನು ಪ್ರದರ್ಶಿಸುವುದಿಲ್ಲ ಎಂದಿದ್ದಾರೆ. ಆದರೆ, ನಾನು ಇದರ ವಿರುದ್ಧ ಹೊರಾಡಲಿದ್ದೇನೆ. ನನ್ನ ಸಿನಿಮಾ ಪ್ರದರ್ಶನಗೊಳ್ಳುಲು ಕಾನೂನು ಹೋರಾಟಕ್ಕೆ ನಾನು ರೆಡಿಯಾಗಿದ್ದೇನೆ. ಈಗಾಗಲೇ, ಇದರ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿಯೇ ರಿಲೀಸ್ ಆಗಲಿದೆಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ. ಈ ಚಿತ್ರದಲ್ಲಿ ವರ್ಮಾರ ಮೆಚ್ಚಿನ ನಟಿ ಅಪ್ಸರಾ ರಾಣಿ, ನಟಿ ನೈನಾ ಗಂಗೂಲಿ ಲೆಸ್ಬಿಯನ್ಸ್‌ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಡೇಂಜರಸ್ಸಿನಿಮಾದ ಟ್ರೈಲರ್, ಟೀಸರ್‌ಗಳಲ್ಲಿಯೇ ತುಂಬಾ ಹಸಿಬಿಸಿ ಶೃಂಗಾರದ ದೃಶ್ಯಗಳು ಇವೆ. ಈ ಹಿಂದೆ ವರ್ಮಾ ಅವರ ಬೇರೆ ಎರಡು ಸಿನಿಮಾಗಳ ರಿಲೀಸ್ ತಡೆಯಲಾಗಿದೆ. ಈ ನಿರ್ದೇಶಕರ ಕರೊನಾ ಕುರಿತಾದ ಸಿನಿಮಾ ಬಿಡುಗಡೆ ಆಗಿಲ್ಲ.
    ಆ ಸಿನಿಮಾಗೆ ನ್ಯಾಯಾಲಯವೇ ತಡೆ ಹೇರಿದ್ದು, ಆ ಸಿನಿಮಾದ ಜತೆಗೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದ ದೀಕ್ಷಾಳ ಹತ್ಯಾಚಾರದ ಬಗ್ಗೆಯೂ ಅವರು ಒಂದು ಸಿನಿಮಾ ಮಾಡಿದ್ದು ಅದರ ಮೇಲೆಯೂ ನ್ಯಾಯಾಲಯವೇ ತಡೆ ಹೇರಿದೆ. ಇನ್ನು, ತೆಲಂಗಾಣದಲ್ಲಿಯೇ ಪ್ರಣಯ್‌ ಎಂಬ ಪ್ರೀತಿಸಿ ಮದುವೆಯಾದ ಹುಡುಗ ನನ್ನು ಆತನ ಪತ್ನಿಯ ತಂದೆಯೆ ಹತ್ಯೆ ಮಾಡಿಸಿದ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಹೀಗೆ, ಮರ್ಯಾದೆಗೇಡು ಹತ್ಯೆಗೆ ತುತ್ತಾದ ಪ್ರಣಯ್‌ ಅವರನ್ನು ಕುರಿತಾಗಿ ಸಹ ವರ್ಮಾ ಅವರು ಮರ್ಡರ್‘ ಎಂಬ ಒಂದು ಸಿನಿಮಾ ಮಾಡಿದ್ದು, ಆ ಚಿತ್ರವೂ ಹಲವು ವಿವಾದಗಳಿಗೆ ಕಾರಣವಾಗಿತ್ತು. ಅದೇನೇ ಇರಲಿ, ಹೀಗೆ ಒಂದರ ನಂತರ ಒಂದು ವರ್ಮಾ ಅವರ ಸಿನಿಮಾಗಳು ರಿಲೀಸ್ ಕೂಡಾ ಆಗದೇ ಇರುವುದು ಅವರಿಗೆ ತುಂಬಾನೆ ನಷ್ಟವನ್ನು ಉಂಟು ಮಾಡುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ

    ಕೇವಲ ಆರು ದಿನಗಳಲ್ಲಿ ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಸಿನಿಮಾ ಒಟಿಟಿಯಲ್ಲಿ

    ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ!

    ನನ್ನ ಉಸಿರಿರುವವರೆಗೂ ಶಕ್ತಿಧಾಮದ ಮಕ್ಕಳ ಜೊತೆ ಇರುತ್ತೇನೆ: ಶಿವಣ್ಣ! ಈ ಮಕ್ಕಳಲ್ಲಿ ಅಪ್ಪುನ ನೋಡುತ್ತಿದ್ದೇನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts