ಇನ್ನು, ಶಕ್ತಿಧಾಮದ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ''ಸ್ತ್ರಿ ಅಂದರೆ ಒಂದು ಶಕ್ತಿ. ಭಗವಂತ ಸೃಷ್ಟಿ ಮಾಡುವಾಗ ತಾಯಂದರಿಗೆ ಹೆಚ್ಚು ತೂಕ ಕೊಟ್ಟಿದಾನೆ. ಶಿವರಾಜ್ ಕುಮಾರ್ ಅವರು ಇದನ್ನು ಮುನ್ನಡೆಸುತ್ತಿರುವುದು ಖುಷಿಯ ವಿಚಾರ. ಒಂದು ಸರ್ಕಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಅಪ್ಪುಗೆ ತಾಯಿ ಕರುಳು ಇತ್ತು. ಈ ಕಾರಣಕ್ಕೆ ಅವರು ಇಷ್ಟೊಂದು ಜನಕ್ಕೆ ಸಹಾಯ ಮಾಡಿದ್ದರು'', ಎಂದು ಹೇಳಿದ್ದಾರೆ. ಅಂದಹಾಗೆ, ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣ ಮಾಡಬೇಕು ಎಂಬುದು ದೊಡ್ಮನೆ ಕುಟುಂಬದ ಬಹು ವರ್ಷಗಳ ಕನಸಾಗಿದ್ದು, ಪುನೀತ್ ರಾಜ್ಕುಮಾರ್ ಸಹ ಇದೇ ಕನಸು ಹೊಂದಿದ್ದರು.