ಹಾಗಾಗಿ, ಸಿನಿಪ್ರಿಯರ ಮತ್ತು ರಾಜಕೀಯ ವಲಯದಲ್ಲಿ ಹಾಗೂ ಜನಸಾಮಾನ್ಯರಲ್ಲಿ ಕೂಡ ಈ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ ಎಂದರೇ ತಪ್ಪಾಗುವುದಿಲ್ಲ. ಚಿತ್ರದಲ್ಲಿ ತನುಜಾ ಎಂಬ ಪಾತ್ರದಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು' ಖ್ಯಾತಿಯ ಸಪ್ತಾ ಪಾವೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಜತೆಗೆ ರಾಜೇಶ್ ನಟರಂಗ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಅವರು ಕೂಡಾ ಬೇರೆ ಬೇರೆ ಪಾತ್ರಗಳಲ್ಲಿ ಬೆಳ್ಳಿ ತೆರೆಯ ಮೇಲೆ ಮಿಂಚಲಿದ್ದಾರೆ. ಹಾಗೆಯೇ, ದ್ಯೋತನ್ ಅವರು ಸಂಗೀತ ನಿರ್ದೇಶನ ಮಾಡಲಿದ್ದು, ರವೀಂದ್ರನಾಥ್ ಅವರು ಛಾಯಾಗ್ರಹಕರಾಗಿದ್ದು, ಉಮೇಶ್ ಆರ್.ಬಿ ಅವರ ಸಂಕಲನ ಈ ಸಿನಿಮಾಗಿದೆ. ‘ಬಿಯಾಂಡ್ ವಿಷನ್ಸ್ ಸಿನಿಮಾಸ್ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.