ಕೇವಲ ಆರು ದಿನಗಳಲ್ಲಿ ಪುನೀತ್ ರಾಜ್​ಕುಮಾರ್ 'ಜೇಮ್ಸ್' ಸಿನಿಮಾ ಒಟಿಟಿಯಲ್ಲಿ

Published on
ಕರುನಾಡ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ನಿಧನರಾದರೂ ಅಭಿಮಾನಿಗಳ ಮನದಲ್ಲಿ ಮಾತ್ರ ಎಂದೆಂದಿಗೂ ಜೀವಂತ. ಇದಕ್ಕೆ ಉದಾಹರಣೆ ಅಂದರೆ ಅದು ನಟ ಪುನೀತ್ ರಾಜ್​ಕುಮಾರ್ ಅವರ ಕೊನೆಯ ಸಿನಿಮಾವನ್ನು ಅಭಿಮಾನಿ ದೇವರುಗಳು ಆಧರಿಸಿದ ರೀತಿ. ಅಭಿಮಾನಿಗಳಿಂದಲೇ ‘ಜೇಮ್ಸ್’ ಸೂಪರ್ ಡೂಪರ್ ಹಿಟ್ ಆಗಿದೆ. ರಿಲೀಸ್ ಆದ ಕೇವಲ ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಚಿತ್ರವಾಗಿದೆ. ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಸಿನಿಮಾದ ಅಬ್ಬರ, ಆರ್ಭಟವನ್ನು ಈಗಾಗಲೇ ನೋಡಿದ್ದೇವೆ. ಈ ಸಿನಿಮಾ ಸೃಷ್ಟಿಸಿದ ದಾಖಲೆಗಳು ಒಂದಲ್ಲ ಎರಡಲ್ಲ. ಅಂತಹ ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಪ್ರಸಾರ ಆಗಲಿದೆ.
ಹೌದು, ಅಪ್ಪು ಅವರು ಹೀರೋ ಆಗಿ ನಟಿಸಿದ ಕೊನೆಯ 'ಜೇಮ್ಸ್' ಸಿನಿಮಾ ಒಟಿಟಿ ಪ್ರೀಮಿಯರ್​ಗೆ ದಿನಗಣನೆ ಆರಂಭ ಆಗಿದೆ. ಸೋನಿ ಲಿವ್ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 'ಜೇಮ್ಸ್' ಪ್ರಸಾರ ಆಗಲಿದೆ. ಆ ದಿನಾಂಕ ಯಾವುದು ಅಂತೀರಾ...? ಅಂದಹಾಗೆ, ಅಪ್ಪು ಅವರ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್​ಗಳನ್ನು ಕೂಡಾ ಏ.14 ರಿಂದ ಸಿನಿಪ್ರೇಕ್ಷಕರು ವೀಕ್ಷಣೆ ಮಾಡಬಹುದು ಎಂದು ಸೋನಿ ಲಿವ್ ಸಂಸ್ಥೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಜೇಮ್ಸ್’ ಬಿಡುಗಡೆ ಆದಾಗ ನಟ ಶಿವರಾಜ್​ಕುಮಾರ್, ನಟ ರಾಘವೇಂದ್ರ ರಾಜ್​ಕುಮಾರ್, ನಟ ವಿನಯ್ ರಾಜ್​ಕುಮಾರ್, ನಟ ಯುವ ರಾಜ್​ಕುಮಾರ್ ಸೇರಿದಂತೆ ಅಣ್ಣಾವ್ರ ಕುಟುಂಬದ ಬಹುತೇಕರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ವೀಕ್ಷಿಸಿದ್ದರು. ಹಲವು ದಿನಗಳ ಬಳಿಕ ಈ ಸಿನಿಮಾ ನೋಡಿದ ಗೀತಾ ಶಿವರಾಜ್​ಕುಮಾರ್ ಅವರು ತುಂಬಾನೆ ಎಮೋಷನಲ್ ಆಗಿದ್ದರು. ಅಪ್ಪು ನಿಧನರಾಗಿದ್ದ ಕಾರಣ ಈ ಸಿನಿಮಾ ಮೂಲಕ ಕೊನೆಯ ಬಾರಿ ಅಪ್ಪು ಅವರನ್ನು ಹೀರೋ ಆಗಿ ತೆರೆ ಮೇಲೆ ಮಿಂಚುವುದು ಕಂಡ ಅಭಿಮಾನಿಗಳು, ಚಿತ್ರಮಂದಿರದಿಂದ ಕಣ್ಣೀರು ಹಾಕುತ್ತಲೆ ಹೊರಬಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net