More

    ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ವಿವಾದಾತ್ಮಕ ಟ್ವೀಟ್​: ಬಿಜೆಪಿಯಿಂದ ದೂರು ದಾಖಲಾದ ಬಳಿಕ ವರ್ಮಾ “ಯೂ ಟರ್ನ್​”!

    ಮುಂಬೈ: ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಇದೀಗ ಇದೇ ರೀತಿಯ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಾರಿ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮರ್ಮು ಅವರ ಬಗ್ಗೆ ಟ್ವೀಟ್​​ ಮಾಡಿರುವ ನಿರ್ದೇಶಕನ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

    ತೆಲಂಗಾಣದ ಬಿಜೆಪಿ ಮುಖಂಡರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ.ನಂದೇಶ್ವರ್​​ ಗೌಡ ಎಂಬುವವರು ಹೈದರಾಬಾದ್​ನ ಅಬಿಡ್ಜ್​ ಪೊಲೀಸ್​ ಠಾಣೆಯಲ್ಲಿ ವರ್ಮಾ ವಿರುದ್ಧ ದೂರು ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

    ಎನ್​ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರ ಹೆಸರು ಘೋಷಣೆಯಾದ ಬಳಿಕ ಟ್ವೀಟ್​ ಮಾಡಿದ್ದ ರಾಜಗೋಪಾಲ್​ ವರ್ಮಾ, ದ್ರೌಪದಿಯವರು ರಾಷ್ಟ್ರಪತಿಯಾದರೆ ಪಾಂಡವರು ಮತ್ತು ಕೌರವರು ಯಾರು ಎಂದು ಟ್ವೀಟ್​ ಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.

    ಈ ಎಲ್ಲಾ ವಿವಾದ ಹುಟ್ಟುಹಾಕಿದ ಬಳಿಕ ಎಚ್ಚೆತ್ತ ವರ್ಮಾ, ಇದನ್ನು ನಾನು ವ್ಯಂಗ್ಯವಾಗಿ ಹೇಳಿದೆಯಷ್ಟೇ, ಅದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ಅಚ್ಚುಮೆಚ್ಚಿನ ಪಾತ್ರವಾಗಿರುವುದರಿಂದ, ಈಗ ರಾಷ್ಟ್ರಪತಿ ಅಭ್ಯರ್ಥಿಯಾಗಿರುವವರ ಹೆಸರು ಅದೇ ಇರುವುದರಿಂದ ಆ ಪಾತ್ರಕ್ಕೆ ಹೋಲಿಸಿ ಟ್ವೀಟ್​ ಮಾಡಿದ್ದೇನೆ, ಯಾರ ಮನಸ್ಸಿಗೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ರಾಜ್ಯದ ಹಲವೆಡೆ ಲಘು ಭೂಕಂಪನ, ಎಲ್ಲೆಲ್ಲಿ ಯಾವಾಗ?

    ಜುಲೈ ತಿಂಗಳಲ್ಲಿ 8 ದಿನಗಳು ಬ್ಯಾಂಕ್​ಗಳಿಗೆ ರಜೆ: ಯಾವಾಗ, ಎಲ್ಲೆಲ್ಲಿ ಅನ್ವಯ ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts