

ನವದೆಹಲಿ: ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಏಕೆಂದರೆ ಬರುವ ತಿಂಗಳು ಬಹುತೇಕ ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಬ್ಯಾಂಕುಗಳಿಗೆ ಆಯಾ ಪ್ರದೇಶಕ್ಕನುಗುಣವಾಗಿ ರಜೆ ನೀಡಲಾಗುತ್ತಿದೆ. ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಬ್ಯಾಂಕ್ಗಳ ರಜೆಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಮೂರು ವಿಭಾಗಗಳಲ್ಲಿ ಬ್ಯಾಂಕ್ಗಳಿಗೆ ರಜೆ ನೀಡುತ್ತದೆ. ಹಾಗಾಗಿ ಬರುವ ತಿಂಗಳು ಬರೋಬ್ಬರಿ 14 ದಿನಗಳು ರಜೆ ಇರಲಿದೆ.
ಜುಲೈ ತಿಂಗಳಲ್ಲೇ 5 ಭಾನುವಾರ, ಎರಡನೇ ಹಾಗೂ ಕೊನೇ ಶನಿವಾರ ಮತ್ತು ಜುಲೈ 11 ರಂದು ಈದ್ ಇರುವುದರಿಂದ ದೇಶಾದ್ಯಂತ ಬ್ಯಾಂಕ್ಗಳಿಗೆ ಒಟ್ಟು 8 ದಿನ ರಜೆ ಇರಲಿದೆ. ಈ ನಡುವೆ ಉತ್ತರ ಭಾರತದಲ್ಲಿ ಅಗರ್ತಲ, ಶಿಲ್ಲಾಂಗ್ ಗ್ಯಾಂಗ್ಟಕ್ ಸೇರಿದಂತೆ ಹಲವು ನಗರಗಳಲ್ಲಿ ಇನ್ನೂ ಒಂದು ವಾರಗಳ ಕಾಲ ಪ್ರತ್ಯೇಕ ರಜೆಗಳು ಸೇರಿವೆ.
ಸದ್ಯಕ್ಕೆ ದೇಶಾದ್ಯಂತ ಒಟ್ಟು 8 ದಿನ ಬ್ಯಾಂಕ್ಗಳಿಗೆ ರಜೆ ಇದ್ದು, ಏನೇ ಕೆಲಸವಿದ್ದರೂ ರಜೆಗೂ ಮುನ್ನ ಮುಗಿಸಿಕೊಳ್ಳುವುದು ಒಳ್ಳೆಯದು. (ಏಜೆನ್ಸೀಸ್)