ಎಂಪಿ ರಾಜ್ಯಪಾಲರ ಆರೋಗ್ಯದಲ್ಲಿ ಇಲ್ಲ ಸುಧಾರಣೆ; ಡಯಾಲಿಸಿಸ್​ ಮಾಡುತ್ತಿದ್ದೇವೆಂದ ವೈದ್ಯರು

Lalji
Published on

ಮಧ್ಯಪ್ರದೇಶದ ರಾಜ್ಯಪಾಲ ಲಾಲ್​ ಜಿ ಟಂಡನ್​ ಅವರ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಇನ್ನೂ ವೆಂಟಿಲೇಟರ್​​ನಲ್ಲಿಯೇ ಇಟ್ಟು ಚಿಕಿತ್ಸೆ ನಿಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಲಾಲ್​ ಜಿ ಟಂಡನ್​ ಅವರನ್ನು ಲಖನೌದಲ್ಲಿರುವ ಮೇದಾಂತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ವರ, ಮೂತ್ರಪಿಂಡ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಅವರು ಬಳಲುತ್ತಿದ್ದಾರೆ.

ಲಾಲ್​ಜಿ ಅವರಿಗೆ ಡಯಾಲಿಸಿಸ್​ ಮಾಡಲಾಗುತ್ತಿದೆ. ವೆಂಟಿಲೇಟರ್​ ಚಿಕಿತ್ಸೆಯನ್ನೇ ಮುಂದುವರಿಸಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ರಾಕೇಶ್​ ಕಪೂರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net