More

    ಕರೊನಾಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೀರಾ? ಹಾಗಿದ್ದಲ್ಲಿ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ

    ಬೆಂಗಳೂರು: ಕೋವಿಡ್​ ಪ್ರಕರಣ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದೆ. ಹಾಗಾಗಿ ಸೋಂಕಿನ ಲಕ್ಷಣ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ 50 ವರ್ಷದೊಳಗಿನ ಹಲವರಿಗೆ ಮನೆ ಆರೈಕೆಗೆ ಸೂಚಿಸಲಾಗುತ್ತಿದೆ.

    ಮನೆಯಲ್ಲೇ ಆರೈಕೆಗೆ ಒಳಗಾಗುವ ಕರೊನಾ ಸೋಂಕಿತರು ಕಡ್ಡಾಯವಾಗಿ ಒಂದಷ್ಟು ನಿಯಮವನ್ನು ಪಾಲಿಸಲೇ ಬೇಕಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು “ನನ್ನ ಮನೆ, ನನ್ನ ಕೋವಿಡ್​ ಆರೈಕೆ ಕೇಂದ್ರ’ ಶೀರ್ಷಿಕೆಯಡಿ ಸಲಹೆಗಳನ್ನು ನೀಡಿದೆ.

    ಇದನ್ನೂ ಓದಿರಿ ವಧುಗೆ ಕರೊನಾ, ಮದುವೆಗೆ ಹೋದ 7 ಜನರಿಗೂ ಪಾಸಿಟಿವ್​!

    ಮನೆ ಆರೈಕೆಗೆ ಒಳಗಾದವರು ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್​ ಅಥವಾ ಎನ್​-95 ಮಾಸ್ಕ್​ ಧರಿಸಬೇಕು. ಪ್ರತಿ 8 ಗಂಟೆಗೊಮ್ಮೆ ಈ ಮಾಸ್ಕ್​ ಅನ್ನು ಸೋಡಿಯಂ ಹೈಪ್ಲೋ-ಕ್ಲೋರೈಡ್​ ದ್ರಾವಣ ಬಳಸಿ ವಿಲೇವಾರಿ ಮಾಡಬೇಕು. ನಿಗದಿತ ಕೋಣೆಯಲ್ಲೇ ಉಳಿದು, ಇತರರೊಂದಿಗೆ 2 ಮೀಟರ್​ ಅಂತರ ಕಾಯ್ದುಕೊಳ್ಳಬೇಕು. ನಿತ್ಯ ಕನಿಷ್ಠ 2 ಲೀಟರ್​ ಬಿಸಿ ಅಥವಾ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.

    ಕೆಮ್ಮುವಾಗ ಮತ್ತು ಸೀನುವಾಗ ಮೊಣಕೈ ಅನ್ನು ಅಡ್ಡ ಇಟ್ಟುಕೊಳ್ಳಬೇಕು. ಕರವಸ್ತ್ರ ಅಥವಾ ಟಿಶ್ಯೂ ಪೇಪರ್​ ಬಳಸಬೇಕು. ಕನಿಷ್ಠ 40 ಸೆಕೆಂಡ್ ಕಾಲ ಸಾಬೂನಿಂದ ಕೈಗಳನ್ನು ತೊಳೆಯಬೇಕು. ವೈಯಕ್ತಿಕ ವಸ್ತುಗಳಾದ ಟವೆಲ್​, ಪಾತ್ರೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಕೋಣೆಗಳನ್ನು ಆಗಾಗ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛ ಮಾಡುತ್ತಿರಬೇಕು. ಸ್ನಾನಗೃಹ ಹಾಗೂ ಶೌಚಗೃಹವನ್ನು ದಿನಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡಬೇಕು.

    ಪ್ರತಿದಿನ ಪಲ್ಸ್​ ಆಕ್ಸಿಮೀಟರ್​ ಮತ್ತು ಡಿಜಿಟಲ್​ ಥರ್ಮಾ ಮೀಟರ್​ನಿಂದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯಕರ ಮತ್ತು ಪೌಷ್ಠಿಕ ಆಹಾರ ಸೇವಿಸಬೇಕು. ಧೂಮಪಾನ, ತಂಬಾಕು, ಮದ್ಯ ಸೇವಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಹೆಚ್ಚಿನ ಮಾಹಿತಿಗೆ ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡಬಹದು.

    ನಟ ಧ್ರುವ ಸರ್ಜಾ ಮತ್ತು ಪತ್ನಿಗೆ ಕರೊನಾ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts