ಭಗವದ್ಗೀತೆಯ ಸಂದೇಶ, ವೀರ್ ಸಾವರ್ಕರ್​ ಜೀವನ ಚರಿತ್ರೆ ಪಠ್ಯದಲ್ಲಿ ಕಡ್ಡಾಯ ಎಂದ ಮಧ್ಯಪ್ರದೇಶ ಸರ್ಕಾರ

books
Published on

ಭೂಪಾಲ್: ಭಗವದ್ಗೀತೆಯ ಸಂದೇಶದ ಜತೆಗೆ ವೀರ್ ಸಾವರ್ಕರ್​​ರ ಜೀವನ ಚರಿತ್ರೆಯನ್ನು ಕಡ್ಡಾಯ ವಿಷಯವಾಗಿ ಸೇರಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾ‌ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಚಿಚರು, ಮಧ್ಯಪ್ರದೇಶ ಸರ್ಕಾರವು ಭಗವಾನ್ ಪರಶುರಾಮ, ಭಗತ್ ಸಿಂಗ್‌, ಸುಖದೇವ್, ರಾಜಗುರು ಮತ್ತು ಇತರರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ನಿರ್ಧರಿಸಿದೆ. ದುರದೃಷ್ಟವಶಾತ್, ಕಾಂಗ್ರೆಸ್ ಭಾರತದ ನಿಜವಾದ ಕ್ರಾಂತಿಕಾರಿಗಳ ಬಗ್ಗೆ ಬೋಧಿಸಲಿಲ್ಲ. ನಾವು ನಿಜವಾದ ವೀರರ ಜೀವನಚರಿತ್ರೆಗಳನ್ನು ಸೇರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್​​.ಬಿ.ಶೆಟ್ಟಿ ನಟನೆಯ ಟೋಬಿ ಚಿತ್ರದ ಫಸ್ಟ್​ ಲುಕ್​ ರಿಲೀಸ್​; ಪ್ರೇಕ್ಷಕರು ಹೇಳಿದ್ದೇನು?

ಶಿಕ್ಷಣ ಸಚಿವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಾವರ್ಕರ್​​ ಮಹತ್ವದ ಪಾತ್ರವನ್ನು ಒತ್ತಿಹೇಳಿದ್ದು, ಸಾವರ್ಕರ್ ಸ್ವಾತಂತ್ರ್ಯ ಚಳವಳಿಯ ದೊಡ್ಡ ಆಧಾರಸ್ತಂಭವಾಗಿದ್ದರು. ಬ್ರಿಟಿಷರು ಅವರಿಗೆ ಭಯಪಡುತ್ತಿದ್ದರು. ಸಾವರ್ಕರ್​​ ಒಂದೇ ಜನ್ಮದಲ್ಲಿ ಎರಡು ಜೀವಾವಧಿ ಶಿಕ್ಷೆ ಅನುಭವಿಸಿದ್ದಾರೆ. ಯಾವುದೇ ಕಾಂಗ್ರೆಸ್ಸಿಗರು ಅಂತಹ ಶಿಕ್ಷೆಯನ್ನು ಪಡೆದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಆದರೆ, ಸಾವರಕರ್ ಅವರನ್ನು ಸೇರ್ಪಡೆಗೊಳಿಸುವ ನಿರ್ಧಾರದ ಬಗ್ಗೆ ಕಾಂಗ್ರೆಸ್ ಬಿಜೆಪಿ ನೇತೃತ್ವದ ರಾಜ್ಯ ತರಾಟೆಗೆ ತೆಗೆದುಕೊಂಡಿದೆ. ಸಾವರ್ಕರ್​​ರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಿಕೊಳ್ಳಲು ಬಯಸುತ್ತಿರುವುದು ದುರದೃಷ್ಟಕರ. ಅವರು ಬ್ರಿಟಿಷರ ಕ್ಷಮೆಯಾಚಿಸಿದ್ದು,ಪಠ್ಯಕ್ರಮದಲ್ಲಿ ಅವರನ್ನು ಸೇರಿಸುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net