

ನವದೆಹಲಿ: ಮದ್ವೆ ದಿನ ವರ, ಮೆರವಣಿಗೆಯಲ್ಲಿ ಕಾರಲ್ಲಿ ಬರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ಮಾತ್ರ ಆಂಬುಲೆನ್ಸ್ ಮೂಲಕವಾಗಿ ಮಂಟಪಕ್ಕೆ ಬಂದಿಳಿದಿದ್ದಾನೆ.
ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಮದ್ವೆಯ ಹಿಂದಿನ ದಿನ ವರ ಅಪಘಾತ ಕ್ಕೊಳಗಾದ. ಕಾಲು ಮುರಿದಿದ್ದರೂ ವರ, ನಿಗದಿತ ಮುಹೂರ್ತದಂದೇ ಮದುವೆಯಾಗಲು ನಿರ್ಧರಿಸಿದನು. ವರ ಆಂಬ್ಯುಲೆನ್ಸ್ನಲ್ಲಿ ಆಗಮಿಸಿ ಸ್ಟ್ರೆಚರ್ನಲ್ಲಿ ಕುಳಿತುಕೊಂಡೇ ಮದುವೆಯ ವಿಧಿ ವಿಧಾನಗಳಲ್ಲಿ ನಡೆಸಿದ್ದಾನೆ.
ನಡೆದಿದ್ದೇನು?: ಚಂದ್ರೇಶ್ ಮಿಶ್ರಾರ ಮದುವೆ ಜಾರ್ಖಂಡ್ನ ಪಲಾಮು ಜಿಲ್ಲೆಯ ಮೇದಿನಿನಗರದ ಹೋಟೆಲ್ನಲ್ಲಿ ಜೂನ್ 25 ರಂದು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಚಂದ್ರೇಶ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಕಾಲು ಮುರಿತವಾಗಿದ್ದ ಕಾರಣ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು. ಚಂದ್ರೇಶ್ ಸ್ಥಿತಿಯಿಂದ ಆತಂಕಗೊಂಡ ಕುಟುಂಬಸ್ಥರು ಮದುವೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ, ಮಿಶ್ರಾ ಎಲ್ಲಾ ನೋವಿನ ಮಧ್ಯೆಯೂ ನಿಗದಿತ ದಿನಾಂಕದಂದೇ ಸ್ಟ್ರಚರ್ನಲ್ಲಿ ಕುಳಿತುಕೊಂಡೇ ಸಪ್ತಪದಿ ತುಳಿದರು. ಮದುವೆಗೆ ಆಗಮಿಸಿದ ಬಂಧು-ಬಳಗದವರು ನವದಂಪತಿಯನ್ನು ಹಾರೈಸಿದ್ದಾರೆ.