ಕೃಷಿ ಹೊಂಡದೊಳಗೆ ಗಾಂಜಾ ಗಿಡ; 20 ಕೆ.ಜಿ ತೂಕವುಳ್ಳ 25 ಗಿಡಗಳ ಜತೆ ಆರೋಪಿ ಅರೆಸ್ಟ್

The accused was arrested with 25 Hemp plants weighing 20 kg inside the agricultural pit
Published on

ಚಾಮರಾಜನಗರ: ಜಮೀನಿನಲ್ಲಿ ಬೆಳೆಗಳಿಗೆ ನೀರು ಒದಗಿಸಲು ನಿರ್ಮಾಣ ಮಾಡಿದ ಕೃಷಿ ಹೊಂಡದಲ್ಲಿ ಗಾಂಜಾ ಗಿಡ ಬೆಳೆದ್ದವನು ಪೊಲೀಸರಿಗೆ ಸಿಕ್ಕಿದ್ದಿದ್ದಾನೆ.

ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಅಂಡೇಕುರುಬನದೊಡ್ಡಿ ಗ್ರಾಮದ ಗುರುಸ್ವಾಮಿ(50) ಬಂಧಿತ ಆರೋಪಿ. ಕೃಷಿ ಹೊಂಡದೊಳಗೆ ಗಾಂಜಾ ಗಿಡ ಬೆಳೆದು ಸಿಕ್ಕಿ ಬಿದ್ದಿದ್ದಾನೆ.

ಗುರುಸ್ವಾಮಿ ತನ್ನ ಜಮೀನಿನ ಕೃಷಿ ಹೊಂಡದಲ್ಲಿ ನೀರು ಸಂಗ್ರಹ ಮಾಡದೆ ಖಾಲಿ ಬಿಟ್ಟಿದ್ದ. ಇದರೊಳಗೆ ಗಾಂಜಾ ಬೆಳೆದಿದ್ದ ಎನ್ನುವ ಖಚಿತ ಮಾಹಿತಿ ಆಧರಿಸಿ ಗುರುವಾರ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೃಷಿ ಹೊಂಡದಲ್ಲಿ ಬೆಳೆದಿದ್ದ 20 ಕೆ.ಜಿ ತೂಕವುಳ್ಳ 25 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net