ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ

BJP MLA
Published on

ಮಧ್ಯಪ್ರದೇಶ: ಜನರು ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿರುವುದರಿಂದ ಮೊರೆನಾ ಜಿಲ್ಲೆಯ ಶಂಕರ ಗ್ರಾಮದ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಬಿಜೆಪಿ ಶಾಸಕರ ಬಳಿ ಮನವಿ ಮಾಡಿದರು. ಈ ಮನವಿ ಕುರಿತಾಗಿ ಬಿಜೆಪಿ ಶಾಸಕ ಸುಬೇದಾರ್ ಸಿಂಗ್ ರಾಜೋಧ ಹೇಳಿರುವ ವೀಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಬಿಜೆಪಿ ಶಾಸಕರು, ಮದ್ಯದಂಗಡಿ ನಿಷೇಧದ ಮಹಿಳೆಯರ ಮನವಿಯನ್ನು ನಿರಾಕರಿಸಿದ್ದು, ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?" ಅಂಗಡಿಗಳನ್ನು ಹೇಗೆ ಮುಚ್ಚಲು ಸಾಧ್ಯ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಸುಬೇದಾರ್ ಸಿಂಗ್ ರಾಜೋಧಾ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಕಟ್ಟಾ ಬೆಂಬಲಿಗ ಎಂದು ಪರಿಗಣಿಸಲಾಗಿದೆ. ಬಿಜೆಪಿ ಶಾಸಕನ ವಿಡಿಯೋ ವೈರಲ್ ಆದ ನಂತರ, ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಪ್ರಶ್ನೆ ಮಾಡುತ್ತಾ ಶಾಸಕ ಸುಬೇದಾರ್ ಸಿಂಗ್ ರಾಜೋಧ ಹೇಳಿಕೆ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಮರು ಆತ್ಮರಕ್ಷಣೆಗಾಗಿ ಬಾಂಬ್‌ ತಯಾರಿಸುತ್ತಿದ್ದಾರೆ: ಆರ್‌ಜೆಡಿ ಶಾಸಕ
ಕಾಂಗ್ರೆಸ್ ರಾಜ್ಯ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್, ಸರ್ಕಾರ ಇಡೀ ರಾಜ್ಯವನ್ನು ಮದ್ಯದಲ್ಲಿ ಮುಳುಗಿಸಿದೆ ಎಂಬುದು ಈ ವೀಡಿಯೊದಲ್ಲಿರುವ ಸತ್ಯವಾಗಿದೆ. ಹಳ್ಳಿ, ನಗರಗಳ ಒಳಗಿನ ರಸ್ತೆಗಳಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಡಿಯೋದಲ್ಲಿ ಬಿಜೆಪಿ ಶಾಸಕ ತನ್ನನ್ನು ತಾನು ಮದ್ಯದ ಗುತ್ತಿಗೆದಾರ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ರೀತಿ ನೋಡಿದರೆ ಮಾಫಿಯಾ ಯಾರೆಂದು ಊಹಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net