More

    ಮೊದಲ ಮೊಬೈಲ್ ಕರೆ ಮಾಡಿ 50 ವರ್ಷ; ಅಂದು ಮೊದಲು ಕರೆ ಮಾಡಿದ್ದು ಯಾರು!

    ನವದೆಹಲಿ: ಇಂದಿನ ಯುಗದಲ್ಲಿ ಫೋನ್‌ಗಳು ಅನಿವಾರ್ಯವಾಗಿವೆ. ಜನರಿಗೆ ಕರೆ ಮಾಡಲು ಮಾತ್ರವಲ್ಲ, ಅದು ಒದಗಿಸುವ ಹಲವಾರು ವೈಶಿಷ್ಟ್ಯಗಳು ಮತ್ತು ಸೇವೆಗಳಿಗಾಗಿ ಮೊಬೈಲ್​​ ಅವಶ್ಯಕವಾಗಿದೆ. ಆದರೆ ಇದು ಯಾವಾಗ ಮತ್ತು ಎಲ್ಲಿ ಪ್ರಾರಂಭವಾಯಿತು ಎಂದು ನಿಮಗೆ ತಿಳಿದಿದೆಯೇ? ಮೂಲಗಳ ಪ್ರಕಾರ ಮೊಟೊರೊಲಾ ಉದ್ಯೋಗಿ ಮಾರ್ಟಿನ್ ಕೂಪರ್ ಅವರು 1973 ಏಪ್ರಿಲ್ 3ರಂದು ಮೊದಲ ಮೊಬೈಲ್ ಫೋನ್ ಕರೆ ಮಾಡಲಾಗಿತ್ತು. ನಿನ್ನೆಗೆ ಸರಿಯಾಗಿ 50 ವರ್ಷಗಳು ಕಳೆದಿವೆ.

    ಇದನ್ನೂ ಓದಿ: ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್!

    ‘ಕೈಯಲ್ಲಿ ಹಿಡಿಯುವ ಸೆಲ್ ಫೋನ್ ಪಿತಾಮಹ’ ಎಂದು ಕರೆಯಲ್ಪಡುವ ಅಮೆರಿಕನ್ ಇಂಜಿನಿಯರ್ ಮಾರ್ಟಿನ್ ಕೂಪರ್ ಅವರು 50 ವರ್ಷಗಳ ಹಿಂದೆ 1973, ಏಪ್ರಿಲ್ 3ರಂದು ಮೊದಲ ಮೊಬೈಲ್ ಫೋನ್ ಕರೆ ಮಾಡಿದರು. ಆ ಸಮಯದಲ್ಲಿ ಮೊಟೊರೊಲಾದಲ್ಲಿ ಎಂಜಿನಿಯರ್ ಆಗಿದ್ದ ಕೂಪರ್ ಅವರು ಪ್ರತಿಸ್ಪರ್ಧಿಯಾಗಿದ್ದ ಕೂಪರ್‌ ಅವರ ಪ್ರತಿಸ್ಪರ್ಧಿ ನ್ಯೂಜೆರ್ಸಿಯ ಡಾ. ಜೋಯೆಲ್‌ ಎಸ್‌.ಎಂಜೆಲ್‌ ಅವರಿಗೆ ಜಗತ್ತಿನ ಮೊದಲ ಮೊಬೈಲ್‌ ಕರೆ ಮಾಡುತ್ತಾರೆ. ಈ ಘಟನೆ ನಡೆದು ಏಪ್ರಿಲ್​3 ಕ್ಕೆ ಸರಿಯಾಗಿ 50 ವರ್ಷಗಳು ಕಳೆದಿವೆ.

    ಇದನ್ನೂ ಓದಿ: VIDEO| ಒಂಬತ್ತು ಕೋಳಿ ಮೊಟ್ಟೆ ಗುಳುಂ ಮಾಡಿದ್ದ ನಾಗಪ್ಪ!

    ಅಂದರೆ, ವಿಶ್ವಕ್ಕೆ ವೈರ್‌ಲೆಸ್‌ ಫೋನ್‌ ಪರಿಚಯವಾಗಿ 50 ವರ್ಷಗಳು ಪೂರ್ಣಗೊಂಡಿವೆ. ಇಂಥದ್ದೊಂದು ಮಹಾನ್‌ ಸಾಧನೆ ಮಾಡಿದ ಮಾರ್ಟಿನ್‌ ಕೂಪರ್‌ ಅವರು ತಮ್ಮ ಅನುಭವ ಹಾಗೂ ಮೊಬೈಲ್‌ ತಂತ್ರಜ್ಞಾನದಲ್ಲಾದ ಪ್ರಗತಿಯನ್ನು ಬಿಚ್ಚಿಟ್ಟಿದ್ದಾರೆ.

    1983ರಲ್ಲಿ ಅಮೆರಿಕದಲ್ಲಿ 1ಜಿ ನೆಟ್‌ವರ್ಕ್‌ನೊಂದಿಗೆ 3,995 ಡಾಲರ್‌(ಇಂದಿನ 12 ಸಾವಿರ ಡಾಲರ್‌) ಮೊತ್ತದಲ್ಲಿ ಲಭ್ಯವಾಗಿದ್ದ ಮೊಬೈಲ್‌, 10 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ ಕೇವಲ 30 ನಿಮಿಷಗಳ ಕಾಲ ಮಾತನಾಡಬಹುದಿತ್ತು. ಈಗ ಕ್ವಿಕ್‌ ಚಾರ್ಜಿಂಗ್‌ ವ್ಯವಸ್ಥೆ ಕೂಡ ಇದೆ. ಇದಾದ 10 ವರ್ಷಗಳ ಬಳಿಕ ಅಂದರೆ 1991ರಲ್ಲಿ 2ಜಿ ನೆಟ್‌ವರ್ಕ್‌ ಬಂದು, 1995ರಲ್ಲಿ ವಾಯ್ಸ ಓವರ್‌ ಇಂಟರ್ನೆಟ್‌ ಪ್ರೊಟೊಕಾಲ್‌ ಪರಿಚಯಿಸಲ್ಪಟ್ಟಿತು. ನಂತರ, ಮೊಬೈಲ್‌ ಫೋನ್‌ ತಿರುಗಿ ನೋಡಿದ್ದೇ ಇಲ್ಲ.

    ಇದನ್ನೂ ಓದಿ: ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯರನ್ನು ಸುಂದರವಾಗಿಸುತ್ತದೆ: ಮೇನಕಾ ಗಾಂಧಿ

    ಆಧುನಿಕ ಸ್ಮಾರ್ಟ್‌ಫೋನ್‌ ಎನ್ನುವುದು ನಾಸಾ 1969ರ ಅಪೋಲೋ 11 ಯೋಜನೆಗೆ(ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಿದ್ದು) ಬಳಸಿದ ಒಟ್ಟಾರೆ ಕಂಪ್ಯೂಟಿಂಗ್‌ ಪವರ್‌ಗಿಂತಲೂ ಲಕ್ಷಪಟ್ಟು ಹೆಚ್ಚು ಬಲಿಷ್ಠವಾಗಿದೆ. ಇದು ಹೀಗೆಯೇ ಮುಂದುವರಿಯುತ್ತಾ ಇರುತ್ತದೆ. ಮುಂದಿನ ಮೊಬೈಲ್‌ ಕ್ರಾಂತಿ ಬಹಳ ದೂರವೇನಿಲ್ಲ. ಸೆಲ್ ಫೋನ್​ನಿಂದ ಅನಾನುಕೂಲತೆಗಳಿವೆ ಎಂದು ನನಗೆ ತಿಳಿದಿದೆ. ಇದಕ್ಕೆ ವ್ಯಸನಿಯಾಗುವ ಜನರು ನಮ್ಮಲ್ಲಿದ್ದಾರೆ. ನಮ್ಮಲ್ಲಿ ಜನರು ತಮ್ಮ ಸೆಲ್ ಫೋನ್‌ಗಳಲ್ಲಿ ಮಾತನಾಡುತ್ತಾ ರಸ್ತೆಯುದ್ದಕ್ಕೂ ನಡೆಯುತ್ತಿದ್ದಾರೆ ಎಂದು ಮಾರ್ಟಿನ್‌ ಕೂಪರ್‌ ಈ ಹಿಂದೆಯೇ ಹೇಳಿದ್ದಾರೆ.

    ತಾಂತ್ರಿಕ ದೋಷ; ಬೆಂಗಳೂರಿನಿಂದ ಹೊರಟಿದ್ದ ಇಂಡಿಗೋ ವಿಮಾನ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts