More

    ಒಂಬತ್ತು ಕೋಳಿ ಮೊಟ್ಟೆ ಗುಳುಂ ಮಾಡಿದ್ದ ನಾಗಪ್ಪ!

    ಶಿವಮೊಗ್ಗ: ಭದ್ರಾವತಿ ತಾಲೂಕಿನ ಪದ್ಮೇನಹಳ್ಳಿಯಲ್ಲಿ ಬರೋಬ್ಬರಿ ಒಂಬತ್ತು ಕೋಳಿ ಮೊಟ್ಟೆಗಳನ್ನು ನುಂಗಿದ್ದ ನಾಗರಹಾವನ್ನು ಶಿವಮೊಗ್ಗದ ಸ್ನೇಕ್ ಕಿರಣ್ ಸೋಮವಾರ ರಕ್ಷಣೆ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: 12 ನೇ ತರಗತಿ ಇತಿಹಾಸ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದುಹಾಕಿದ ʻNCERTʼ

    ಪದ್ಮೇನಹಳ್ಳಿಯ ಚಂದ್ರಪ್ಪ ಎಂಬುವರ ಮನೆಯ ಕೋಳಿ ಗೂಡಿಗೆ ಎಂಟ್ರಿ ಕೊಟ್ಟಿದ್ದ ನಾಗಪ್ಪ ಮೊಟ್ಟೆ ಕಾವಿಗೆ ಇಟ್ಟಿದ್ದ ಎರಡು ಕೋಳಿಗಳನ್ನು ಸಾಯಿಸಿ ಒಂಬತ್ತು ಮೊಟ್ಟೆಗಳನ್ನು ನುಂಗಿತ್ತು. ಕೋಳಿಗಳ ಕೂಗಾಟದಿಂದ ಮನೆ ಪಕ್ಕದಲ್ಲೇ ಇದ್ದ ಗೂಡಿಗೆ ಬೆಳಗ್ಗೆಯೇ ಬಂದ ಮಾಲೀಕರಿಗೆ ಶಾಕ್ ಕಾದಿತ್ತು. ಕೋಳಿ ಮೊಟ್ಟೆ ಕಾವಿಗೆ ಇಟ್ಟಿದ್ದ ಜಾಗದಲ್ಲಿ ಸುಮಾರು ನಾಲ್ಕೂವರೆ ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿತ್ತು.

    ಇದನ್ನೂ ಓದಿ: ಎದೆ ಹಾಲಿನ ಬಣ್ಣದಿಂದ ಪತ್ತೆಯಾಯ್ತು ಕ್ಯಾನ್ಸರ್; 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ ಈ ರೋಗ!
    ತಕ್ಷಣವೇ ಚಂದ್ರಪ್ಪ ಅವರು ಸ್ನೇಕ್ ಕಿರಣ್‌ಗೆ ವಿಷಯ ಮುಟ್ಟಿಸಿದ್ದರು. ಪದ್ಮೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ಕಿರಣ್, ನಾಗರಹಾವು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ನಾಗರಹಾವು ನುಂಗಿದ್ದ ಮೊಟ್ಟೆಗಳನ್ನು ಒಂದೊಂದಾಗಿ ಹೊರಗೆ ಹಾಕಿತು. ಬಳಿಕ ಹಾವನ್ನು ರಕ್ಷಿಸಿ ಕಾಡಿಗೆ ಕಿರಣ್ ಬಿಟ್ಟು ಬಂದರು.

    ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯರನ್ನು ಸುಂದರವಾಗಿಸುತ್ತದೆ: ಮೇನಕಾ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts