More

    ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯರನ್ನು ಸುಂದರವಾಗಿಸುತ್ತದೆ: ಮೇನಕಾ ಗಾಂಧಿ

    ಲಕ್ನೋ: ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯರನ್ನು ಸುಂದರವಾಗಿಸುತ್ತದೆ ಎಂದು ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ.

    ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಜಿಪ್ಟ್‌ ಪ್ರಸಿದ್ಧ ರಾಣಿ ಕ್ಲಿಯೋಪಾತ್ರಾ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದರು. ಕತ್ತೆ ಹಾಲಿನಿಂದ ತಯಾರಿಸಿದ ಸೋಪುಗಳಿಗೆ ದಿಲ್ಲಿಯಲ್ಲಿ 500 ರೂ. ಬೆಲೆ ಇದೆ. ನಾವು ಮೇಕೆ ಹಾಲು ಮತ್ತು ಕತ್ತೆಯ ಹಾಲಿನೊಂದಿಗೆ ಸಾಬೂನು ತಯಾರಿಸಲು ಏಕೆ ಪ್ರಾರಂಭಿಸಬಾರದು? ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

    ಇದನ್ನೂ ಓದಿ:  ಎದೆ ಹಾಲಿನ ಬಣ್ಣದಿಂದ ಪತ್ತೆಯಾಯ್ತು ಕ್ಯಾನ್ಸರ್; 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ ಈ ರೋಗ!  

    ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುತ್ತದೆ. ನಾವು ಕತ್ತೆಯನ್ನು ನೋಡಿ ಎಷ್ಟು ದಿನವಾಯಿತು? ಅವುಗಳ ಸಂಖ್ಯೆ ಕುಸಿಯುತ್ತಿದೆ. ದೋಬಿಗಳು ಕೂಡ ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ . ಕತ್ತೆಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಒಂದು ಸಮುದಾಯ ಕತ್ತೆಗಳಿಂದ ಹಾಲನ್ನು ಕರೆದು, ಆ ಹಾಲಿನಿಂದ ಸಾಬೂನು ತಯಾರಿಸುವುದನ್ನು ಪ್ರಾರಂಭಿಸಿತು. ಕತ್ತೆಗಳ ಹಾಲಿನಿಂದ ಮಾಡಿದ ಸೋಪು ಮಹಿಳೆಯರ ದೇಹವನ್ನು ಎಂದೆಂದಿಗೂ ಸುಂದರವಾಗಿಡುತ್ತದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: 12 ನೇ ತರಗತಿ ಇತಿಹಾಸ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದುಹಾಕಿದ ʻNCERTʼ
    ಮರಗಳು ಕಣ್ಮರೆಯಾಗುತ್ತಿರುವುದರಿಂದ ಕಟ್ಟಿಗೆ ದುಬಾರಿಯಾಗುತ್ತಿದೆ. ಇದೇ ಕಾರಣಕ್ಕೆ ಅಂತ್ಯ ಸಂಸ್ಕಾರದ ವೆಚ್ಚವೂ ಹೆಚ್ಚಾಗಿದೆ. ಮರದ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ಸಾವಿನಲ್ಲೂ ಜನ ತಮ್ಮ ಕುಟುಂಬವನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಾರೆ.ಮರಕ್ಕೆ 15,000 ರಿಂದ 20,000 ರೂ. ನೀಡುವುದಕ್ಕಿಂತ ನಾವು ಹಸುವಿನ ಸಗಣಿಗೆ ಸುಗಂಧ ದ್ರವ್ಯವನ್ನು ಸೇರಿಸಿ ಮತ್ತು ಮೃತದೇಹವನ್ನು ಸುಡಲು ಬಳಸಬೇಕು. ಇದರಿಂದ ಶವಸಂಸ್ಕಾರದ ವೆಚ್ಚವನ್ನು 1,500 ರೂ.ನಿಂದ 2,000 ರೂ.ವರೆಗೆ ಕಡಿಮೆ ಮಾಡುತ್ತದೆ. ಅದಲ್ಲದೇ ಹಸುವಿನ ಸಗಣಿಯಿಂದ ಮಾಡಿದ ಮರದ ದಿಮ್ಮಿಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಆದಾಯ ಗಳಿಸಬಹುದು ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

    ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts