ಬಟ್ಟೆ ಒಗೆಯಲೆಂದು ಹೋದವರು ಬರಲೇ ಇಲ್ಲ; ಅಮ್ಮಂದಿರ ಜತೆಗೆ ಮಕ್ಕಳ ದುರ್ಮರಣ..

Mother
Published on

ಬೀದರ್​: ಬಟ್ಟೆ ಒಗೆಯಲೆಂದು ಹೋದವರು ಮರಳಿ ಬರದ ದುರಂತವೊಂದು ಸಂಭವಿಸಿದೆ. ತಾಯಂದಿರ ಜತೆಗೆ ಮಕ್ಕಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಇಂಥದ್ದೊಂದು ಕರುಣಾಜನಕ ಪ್ರಕರಣ ನಡೆದಿದೆ.

ಬೀದರ್​ನ ಕಂಗಟ್ಟಿ ಗ್ರಾಮದಲ್ಲಿ ಇಂದು ಈ ದುರಂತ ಸಂಭವಿಸಿದೆ. ತಾಯಿ ಆನಂದಾ (37), ಈಕೆಯ ಪುತ್ರ ಪ್ರಜ್ವಲ (10), ಇನ್ನೊಬ್ಬ ತಾಯಿ ಸುನೀತಾ (36), ಈಕೆಯ ಪುತ್ರ ನಾಗ ಶೆಟ್ಟಿ (08) ನೀರುಪಾಲಾಗಿದ್ದಾರೆ. ಈ ಮೂಲಕ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ದಸರಾ ಹಬ್ಬದ ಸಲುವಾಗಿ ಇವರು ಇಂದು ಬಟ್ಟೆ ಒಗೆಯಲು ಗ್ರಾಮದ ಹೊರವಲಯದಲ್ಲಿದ್ದ ಹಳ್ಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ನಾಲ್ವರೂ ನೀರುಪಾಲಾಗಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಜನವಾಡ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 24 ಗಂಟೆಯಲ್ಲಿ ಎರಡು ‌ಕುಟುಂಬದ 6 ಜನ‌ರು ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net