

ಓಹಿಯೋ: ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇಲ್ಲ ಎನ್ನುತ್ತಾರೆ. ಆದರೆ ಬಾಯ್ಫ್ರೆಂಡ್ ಜತೆ ಸೇರಿಕೊಳ್ಳುವ ತಾಯಿ ಅದೆಷ್ಟು ಕೆಟ್ಟವಳಾಗುತ್ತಾಳೆ ಎನ್ನುವುದಕ್ಕೆ ಒಂದು ಉದಾಹರಣೆ ಇದೀಗ ಅಮೆರಿಕದ ಓಹಿಯೋದಲ್ಲಿ ಸಿಕ್ಕಿದೆ.
ಗೋಸ್ನೆ (29) ಹೆಸರಿನ ಮಹಿಳೆ ಜೇಮ್ಸ್ ಹಚಿನ್ಸನ್(6) ಹೆಸರಿನ ಮಗನನ್ನು ಕೊಂದಾಕೆ. ಈಕೆ 42 ವರ್ಷದ ಜೇಮ್ಸ್ ಹ್ಯಾಮಿಲ್ಟನ್ನೊಂದಿಗೆ ಸಂಬಂಧ ಹೊಂದಿದ್ದಾಳೆ. ಭಾನುವಾರದಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಈ ಜೋಡಿ ಜೇಮ್ಸ್ ಹ್ಯಾಮಿಲ್ಟನ್ ಕಳೆದುಹೋಗಿರುವುದಾಗಿ ದೂರು ನೀಡಿದೆ. ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಜೋಡಿಯ ನಿಜ ಬಣ್ಣ ಗೊತ್ತಾಗಿದೆ.
ಗೋಸ್ನೆಗೆ ಜೇಮ್ಸ್ ಜತೆ ಇನ್ನಿಬ್ಬರು ಮಕ್ಕಳಿದ್ದಾರೆ. ಮೂರೂ ಮಕ್ಕಳನ್ನು ಕರೆದುಕೊಂಡು ಗುರುವಾರದಂದು ಆಕೆ ಬಲ್ ಕೌಂಟಿಯ ರಶ್ ರನ್ ಪಾರ್ಕ್‌ಗೆ ಹೋಗಿದ್ದಾಳೆ. ಅಲ್ಲಿ ಜೇಮ್ಸ್ನನ್ನು ಬಿಟ್ಟು ಬರಲು ಪ್ರಯತ್ನಿಸಿದ್ದಾಳೆ. ಆದರ ಆತ ಮತ್ತೆ ಬಂದು ಕಾರು ಹತ್ತಲು ಪ್ರಯತ್ನಿಸಿದ್ದಾನೆ. ಆಗ ಆಕೆ ಆತನನ್ನು ಓಡಿಸಿಕೊಂಡು ಹೋಗಿದ್ದಾಳೆ. ನಂತರ ಅವನನ್ನು ಬಿಟ್ಟು ಪಾರ್ಕಿನಿಂದ ಹೊರಗೆ ಹೋಗಿದ್ದಾಳೆ. ವಾಪಾಸು ಬರುವಷ್ಟರಲ್ಲಿ ಆತನ ಕೊಲೆಯಾಗಿದೆ. ನಂತರ ಆ ದೇಹವನ್ನು ಕಾರಿನೊಳಗೆ ತುಂಬಿಕೊಂಡ ಆಕೆ ಓಹಿಯೋ ನದಿಯ ಸೇತುವೆ ಬಳಿ ಹೋಗಿ ಅಲ್ಲಿಂದ ಆ ಶವವನ್ನು ನದಿಗೆ ಎಸೆದಿದ್ದಾಳೆ.
ಅದಾದ ನಂತರ ಜೋಡಿಯಾಗಿ ಬಂದು ಪೊಲೀಸ್ ದೂರು ದಾಖಲಿಸಿದ್ದಾಳೆ. ಇದೀಗ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾವೇ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ. ಜೇಮ್ಸ್ನ ಮೃತ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ