

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪುರಸಭೆಗಳಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿಕೊಂಡಿದೆ. ಪುರಸಭೆಯ ಐದು ವಾರ್ಡ್ಗಳಲ್ಲಿ ನಾಲ್ಕು ವಾರ್ಡ್ಗಳಲ್ಲಿ ಎಎಪಿ ಗೆಲುವಿನ ಹತ್ತಿರದಲ್ಲಿದ್ದರೆ ಒಂದರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿಕೊಂಡಿದೆ.
ನವದೆಹಲಿ ಪುರಸಭೆಯ ಐದು ವಾರ್ಡ್ಗಳಿಗೆ ಫೆಬ್ರವರಿ 28ರಂದು ಉಪಚುನಾವಣೆ ನಡೆದಿತ್ತು. ಅದರ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದೆ. ಅದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್ಪುರಿ, ತ್ರಿಲೋಕ್ಪುರಿ ಮತ್ತು ರೋಹಿಣಿ- ಸಿ ವಾರ್ಡ್ಗಳಲ್ಲಿ ಎಎಪಿ ಮುನ್ನಡೆ ಸಾಧಿಸಿಕೊಂಡಿದೆ. ಶಾಲಿಮಾರ್ ಬಾಗ್ ನಾರ್ತ್ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್ ಇದ್ದು, ಒಂದು ವೇಳೆ ಅಲ್ಲಿ ಪಕ್ಷ ಸೋತರೆ ಪಕ್ಷಕ್ಕೆ ಮುಖಭಂಗವಾಗಲಿದೆ ಎನ್ನಲಾಗಿದೆ.
ಚೌಹಾಣ್ ಬಂಗಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿಕೊಂಡಿದೆ. ಫೆಬ್ರವರಿ ಅಂತ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಶೇ. 50ರಷ್ಟು ಮತದಾನವಾಗಿತ್ತು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ