ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ: ಪೊಲೀಸರ ಅನುಮಾನವೇ ಬೇರೆ!

BJP MP Son
Published on

ಲಖನೌ: ಉತ್ತರ ಪ್ರದೇಶದ ಬಿಜೆಪಿ ಸಂಸದ ಕೌಶಲ್​ ಕಿಶೋರ್​ ಮಗ ಆಯುಷ್​ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ರಾಜಧಾನಿ ಲಖನೌದಲ್ಲಿ ಮಂಗಳವಾರ ನಡೆದಿದೆ.

ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಆಯುಷ್​ರತ್ತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಆದರೆ ಆಯುಷ್​, ಸಂಬಂಧಿಕರ ಸಹಾಯದಿಂದ ತನ್ನ ಮೇಲೆ ಹಲ್ಲೆ ನಡೆಸಿ, ಕತೆ ಕಟ್ಟಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.

ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಆಯುಷ್​ ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆಯುಷ್​ಗೆ ನಡುವಿನ ಮೇಲೊಂದು ಮತ್ತು ಭುಜದ ಕೆಳಗೊಂಡು ಗಾಯಗಳಾಗಿತ್ತು.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಪರವಾನಗಿ ಪಡೆದು ಪಿಸ್ತೂಲ್​ ಅನ್ನೇ ಬಳಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net