

ಕೋಲ್ಕತ್ತಾ: ತನ್ನ ಮಗುವನ್ನು ಮಹಿಳೆಯೊಬ್ಬರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಕೋಲ್ಕತ್ತಾದಲ್ಲಿ ಶಿಶುವಿನ ತಾಯಿಯನ್ನು ಬಂಧಿಸುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ತಾಯಿ ರೂಪಾಲಿ ಮೊಂಡಲ್ ಎಂದು ಗುರುತಿಸಲಾಗಿದ್ದು, ತನ್ನ ಮಗುವನ್ನು 4 ಲಕ್ಷ ರೂಪಾಯಿಗೆ ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾಳೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಕೋಲ್ಕತ್ತಾದ ನೊಣದಂಗದ ರೈಲ್ ಕಾಲೋನಿಯ ನಿವಾಸಿ ರೂಪಾಲಿ ಎಂಬ ಮಹಿಳೆ ನಡೆಸುತ್ತಿದ್ದ ಅಕ್ರಮ ವ್ಯವಹಾರದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಬಂದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಕೇಳಿದ ಯಾವ ಪ್ರಶ್ನೆಗೂ ಉತ್ತರಿಸಿದ ಆರೋಪಿ ರೂಪಾಲಿಯನ್ನು ಬಂಧಿಸಿದ ಪೊಲೀಸರು, ಕೆಲ ಸಮಯ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡ ಮಹಿಳೆ, ಅಪರಾಧಕ್ಕೆ ಕಾರಣರಾದ ಇತರ ಇಬ್ಬರ ಬಗ್ಗೆ ಸುಳಿವು ನೀಡಿದ್ದಾರೆ. ತದನಂತರ ರೂಪಾ ದಾಸ್ ಮತ್ತು ಸ್ವಪ್ನಾ ಸರ್ದಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ರೂಪಾಲಿ ವಾಸವಿದ್ದ ಪಕ್ಕದ ಮನೆ ನಿವಾಸಿ ಪ್ರತಿಮಾ ಭುವಿನ್ಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ 317 (ಮಗುವನ್ನು ತ್ಯಜಿಸುವುದು), 370 (ವ್ಯಕ್ತಿಯನ್ನು ಖರೀದಿಸುವುದು, ವಿಲೇವಾರಿ ಮಾಡುವುದು), 372 (ಅಪ್ರಾಪ್ತ ವಯಸ್ಕರನ್ನು ಮಾರಾಟ ಮಾಡುವುದು) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಇಬ್ಬರೂ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಮಿಡ್ನಾಪುರದ ಕಲ್ಯಾಣಿ ಗುಹಾ ಎಂಬ ಮಹಿಳೆಗೆ ಮಗುವನ್ನು ಮಾರಾಟ ಮಾಡಿರುವ ಬಗ್ಗೆ ಹೇಳಿದ್ದಾರೆ. ಕೂಡಲೇ ಪರ್ನರ್ಶ್ರೀ ಪೊಲೀಸ್ ಠಾಣೆಯ ಅಧಿಕಾರಿಗಳು ಗುಹಾ ಎಂಬುವರನ್ನು ಬಂಧಿಸಿದ್ದು, ಶಿಶುವನ್ನು ಆಕೆಯ ಕೊಠಡಿಯಿಂದ ರಕ್ಷಿಸಿ, ಶಿಶುಪಾಲನಾ ಘಟಕಕ್ಕೆ ಕಳುಹಿಸಿದ್ದಾರೆ,(ಏಜೆನ್ಸೀಸ್).