

ಉತ್ತುಕುಳಿ: ಬಿಯರ್ ಬಾಟಲಿಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ರಸ್ತೆಯ ತುಂಬ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿರುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಉತ್ತುಕುಳಿ ಬಳಿಯ ಪಲ್ಲಗೌಂಡಪಾಳ್ಯಂ ಬಳಿ ನಡೆದಿದೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಮೂವರಿಗೆ ಜೀಪ್ ಗುದ್ದಿದ ಪೊಲೀಸ್ ಹೆಡ್ಕಾನ್ಸ್ಟೆಬಲ್: ಈತನ ಮೇಲಿದೆ ಮತ್ತೊಂದು ಆರೋಪ
ಪೆರಂಬಲೂರು ಪ್ರದೇಶದ ಸೆಲ್ವಕುಮಾರ್ (40) ಎಂಬವರು ಲಾರಿಯನ್ನು ಚಲಾಯಿಸುತ್ತಿದ್ದು, ಚೆಂಗಲ್ಪಟ್ಟು ಬಿಯರ್ ಕಂಪನಿಯಿಂದ 25,200 ಬಾಟಲಿ ಬಿಯರ್ ತುಂಬಿದ್ದ ಕಾರ್ಗೋ ಟ್ರಕ್ ಹೊರಟು ಪಲ್ಲಗೌಂಡಪಾಳ್ಯಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರನ ತಪ್ಪಿದ ಪರಿಣಾಮ ಪಲ್ಟಿ ಹೊಡೆದಿದೆ. ಬಾಟಲಿಗಳು ರಸ್ತೆ ಬದಿ ರಾಶಿ ರಾಶಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೂಡಲೇ ಅಲ್ಲಿ ನೆರೆದಿದ್ದ ಜನರು ಅಪಘಾತವನ್ನು ಕಂಡು ಕೆಳಗೆ ಚೆಲ್ಲಾಪಿಲ್ಲಿಯಾಗಿದ್ದ ಬಿಯರ್ ಬಾಟಲಿಗಳನ್ನು ಯಾರೂ ತೆಗೆದುಕೊಂಡು ಹೋಗದಂತೆ ಬ್ಯಾರಿಕೇಡ್ ಹಾಕಿದ್ದಾರೆ.
ಉರಿಯುವ ಬೆಂಕಿಯಲ್ಲಿ ತುಪ್ಪ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈಗಿನ ಕಾಲಘಟ್ಟದಲ್ಲಿ ನಾನಾ ನಗರಗಳಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡ, ರಸ್ತೆ ಅಪಘಾತಗಳ ಬಳಿಕ ಸಿಕ್ಕ ಸಿಕ್ಕ ಸಾಮಾನುಗಳನ್ನು ಅನೇಕರು ಹೊತ್ತೊಯ್ಯುವ ವೀಡಿಯೋಗಳನ್ನು ನೋಡುತ್ತಿದ್ದೇವೆ. ಆದರೆ ಆ ಭಾಗದ ಜನರು ಬ್ಯಾರಿಕೇಡ್ ಹಾಕಿ ಬಾಟಲಿಗಳನ್ನು ಎತ್ತಲು ಬಿಡದೇ ಇರುವುದು ಅಚ್ಚರಿ ಮೂಡಿಸಿದೆ.(ಏಜನ್ಸೀಸ್)