More

    ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ? ಪರಿಶೀಲನೆಗೆ ಮುಂದಾಗಿದೆ ಈ ರಾಜ್ಯ..

    ವಡೋದರಾ: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

    ಇದನ್ನೂ ಓದಿ: ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಗೆ ಸಂಕಷ್ಟ?: ಹೈಕೋರ್ಟ್​ಗೆ ಪಿಐಎಲ್

    ಸರ್ದಾರ್ ಪಟೇಲ್ ಗ್ರೂಪ್ ಆಯೋಜಿಸಿದ್ದ ಮೆಹ್ಸಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸಂವಿಧಾನದಲ್ಲಿ ಅವಕಾಶವಿದ್ದರೆ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯನ್ನು ತಮ್ಮ ಸರ್ಕಾರ ಪರಿಶೀಲಿಸುತ್ತದೆ. ಈ ಕುರಿತಾಗಿ ಈಗಾಗಲೇ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.

    ಇನ್ನು, ಕಾಂಗ್ರೆಸ್​​ನ ಶಾಸಕ ಇಮ್ರಾನ್ ಖೆಡವಾಲಾ ಇದಕ್ಕೆ ಬೆಂಬಲಿಸಿದ್ದು, ಹೆಚ್ಚಿನ ಪ್ರೇಮ ವಿವಾಹಗಳಲ್ಲಿ ಪೋಷಕರನ್ನು ಕಡೆಗಣಿಸುತ್ತಿರುವ ಕಾರಣ ಸರ್ಕಾರವು ರಕ್ಷಣಾತ್ಮಕ ಕ್ರಮಗಳನ್ನು ನಿರ್ಮಿಸುವ ಅಗತ್ಯವಿದೆ. ಅನೇಕ ಮುಗ್ಧ ಹುಡುಗಿಯರು ಪ್ರೇಮ ವಿವಾಹ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಹುಡುಗಿಯ ಕುಟುಂಬ ಒಡೆಯುತ್ತದೆ. ಆಕೆ ಮನೆಯಿಂದ ಓಡಿಹೋದಾಗ ಅವಳ ಕುಟುಂಬವು ಸಮಾಜವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಬೆಳೆಸುತ್ತಾರೆ, ಆದ್ದರಿಂದ ಅವರ ಒಪ್ಪಿಗೆಯನ್ನು ಕಡ್ಡಾಯವಾಗಿ ಮಾಡಬೇಕು. ಅಂತಹ ಅನೇಕ ಪ್ರಕರಣಗಳನ್ನು ಸಮಾಜದಲ್ಲಿ ನೋಡಬಹುದಾಗಿದೆ ಎಂದು ಹೇಳಿದ್ದಾರೆ.

    ಇದನ್ನು ಓದಿ: ಕಣ್ಣು, ಮೂಗು, ಕಿವಿ ಇಲ್ಲದಿರುವ ಮಹಿಳೆಯ ಮೃತದೇಹ ಪತ್ತೆ: ಗ್ರಾಮಸ್ಥರು ಕಂಗಾಲು, ಪೊಲೀಸರಿಗೂ ಗೊಂದಲ..

    ಮಾರ್ಚ್‌ನಲ್ಲಿ ಬಿಜೆಪಿ ಶಾಸಕ ಫತೇಸಿನ್ಹ್ ಚೌಹಾಣ್ ಮತ್ತು ಕಾಂಗ್ರೆಸ್ ಶಾಸಕ ಗನಿಬೆನ್ ಠಾಕೋರ್, 2009ರ ವಿವಾಹಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಅಲ್ಲದೇ ಪೋಷಕರ ಸಹಿಯನ್ನು ಕಡ್ಡಾಯಗೊಳಿಸುವಂತೆ ಕೋರಿದ್ದರು. ಪೋಷಕರ ಒಪ್ಪಿಗೆಯಿಲ್ಲದ ವಿವಾಹಗಳನ್ನು ನಿರುತ್ಸಾಹಗೊಳಿಸಬೇಕು ಎಂದು ಠಾಕೋರ್ ಭಾವಿಸಿದ್ದಾರೆ. ಒಪ್ಪಿಗೆಯೊಂದಿಗೆ ಮದುವೆ ಮಾಡಿ ನೋಂದಾಯಿಸಿದರೆ, ಅಪರಾಧದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಚೌಹಾಣ್ ಹೇಳಿದ್ದಾರೆ. ಗುಜರಾತ್ ಈಗಾಗಲೇ ‘ಬಲವಂತದ’ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಹೊಂದಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts