More

    ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಗೆ ಸಂಕಷ್ಟ?: ಹೈಕೋರ್ಟ್​ಗೆ ಪಿಐಎಲ್

    ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಸಂಕಷ್ಟ ಎದುರಾಗಿದ್ದು, ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ.

    ಇದನ್ನೂ ಓದಿ: ಟ್ಯಾಂಕರ್​​​ ಪಲ್ಟಿ: ಸಹಾಯ ಮಾಡದೇ ಎಣ್ಣೆಗಾಗಿ ಮುಗಿಬಿದ್ದ ಜನರು..!

    ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್​​ಗಳಲ್ಲಿ ಜನದಟ್ಟಣೆ ಹೆಚ್ಚಿದ್ದು, ಸೀಟಿಗಾಗಿ ಹೊಡೆದಾಟ ನಡೆಯುತ್ತಿದೆ. ಹಿರಿಯ ನಾಗರಿಕರು,ಮಕ್ಕಳು ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಿದ್ದ ಘಟನೆಗಳು ಜರುಗಿವೆ. ಜತೆಗೆ ವಿದ್ಯಾರ್ಥಿಗಲು ಶಾಲಾ ಕಾಲೇಜು ಪರೀಕ್ಷೆಗಳಿಗೆ ಸರಿಯಾದ ವೇಳೆಗೆ ಹೋಗಲಾಗುತ್ತಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೇ, ಶಕ್ತಿ ಯೋಜನೆಗೆ ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣ ಯೋಜನೆಗೆ ಬಳಕೆಯಾಗಿದ್ದು, ವರ್ಷಕ್ಕೆ 3200 ರಿಂದ 3400 ಕೋಟಿ ರೂಪಾಯಿ ನಷ್ಟವಾಗಲಿದೆ. ಟಿಕೆಟ್ ಖರೀದಿಸಿದವರಿಗೆ ಶೇ.50ರಷ್ಟು ಸೀಟ್ ಮೀಸಲಿಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಐಎಲ್ ಮೂಲಕ ಹೈಕೋರ್ಟ್​ಗೆ ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts