ಕಣ್ಣು, ಮೂಗು, ಕಿವಿ ಇಲ್ಲದಿರುವ ಮಹಿಳೆಯ ಮೃತದೇಹ ಪತ್ತೆ: ಗ್ರಾಮಸ್ಥರು ಕಂಗಾಲು, ಪೊಲೀಸರಿಗೂ ಗೊಂದಲ..

police
ಸಾಂದರ್ಭಿಕ ಚಿತ್ರ
Published on

ಶಹದೋಲ್: ಕಣ್ಣು, ಮೂಗು, ಕಿವಿ ಇಲ್ಲದೇ ಇರುವ ಮಹಿಳೆಯ ಮೃತದೇಹ ಪತ್ತೆಯಾಗಿರುವ ನಿಗೂಢ ಘಟನೆ ಮಧ್ಯಪ್ರದೇಶದ ಶಹದೋಲ್​ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: 'ಸಂಗೀತವು ನೈತಿಕ ಭ್ರಷ್ಟಾಚಾರಕ್ಕೆ ಕಾರಣ': ಗಿಟಾರ್, ತಬಲಾ ಸೇರಿದಂತೆ ಹಲವು ಉಪಕರಣಗಳಿಗೆ ಬೆಂಕಿ

ಮಹಿಳೆಯನ್ನು ವರ್ಷದ ಜುನಿ ಬಾಯಿ ಗೊಂಡ್(55) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಭಾನುವಾರದಂದು ಆಕೆಯ ಮನೆಯಲ್ಲಿ ಮಂಚದ ಕೆಳಗೆ ಆಕೆಯ ಶವ ಬಿದ್ದಿರುವುದು ಕೂಡ ಅನುಮಾನಾಸ್ಪವಾಗಿದ್ದು, ಘಟನೆಯಿಂದ ಜನರು ಕಂಗಾಲಾಗಿದ್ದಾರೆ. 

ಭೀಕರ ಕೃತ್ಯದ ವೇಳೆ ಆಕೆಯ ತಲೆಯ ಕೂದಲನ್ನು ಕತ್ತರಿಸಿ ಪಕ್ಕಕ್ಕೆ ಎಸೆದಿದ್ದು, ಕುತ್ತಿಗೆ ಭಾಗದ ಚರ್ಮದ ಜತೆಗೆ ಕಣ್ಣು, ಕಿವಿ, ಮೂಗು ಕಾಣೆಯಾಗಿವೆ. ತಲೆ ಹೊರತುಪಡಿಸಿ ಮಹಿಳೆಯ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಹಾಸಿಗೆಯ ಮೇಲೆ ಟಾರ್ಚ್ ಮತ್ತು ಇತರ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮೃತದೇಹದ ಬಳಿ ಹುಲ್ಲು ಕೂಡ ಕಂಡು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನೊಂದೆಡೆ ವಯಸ್ಸಾದ ಮಹಿಳೆಯನ್ನು ಯಾರೋ ಕೊಲೆ ಮಾಡಿದ್ದಾರೆ ಅಥವಾ ಪ್ರಾಣಿ ದಾಳಿ ಮಾಡಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇದು ಪೊಲೀಸರಿಗೆ ನಿಗೂಢವಾಗಿ ಪರಿಣಮಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net