

Mother and Son : ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದಾಗ ನಿಮ್ಮ ತಂದೆ-ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಂತೋಷದಿಂದ ಕುಣಿದು ಕುಪ್ಪಳಿಸಬಹುದು. ಆದರೆ, ಬ್ಲೂ ಫಿಲ್ಮ್ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರೆ, ಪಾಲಕರ ಪ್ರತಿಕ್ರಿಯೆ ಹೇಗಿರಬಹುದು?ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಥದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳ ಮೂಲದ ಕಂಟೆಂಟ್ ಕ್ರಿಯೇಟರ್ ಅಶ್ವಿನ್ ಉನ್ನಿ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಶ್ವಿನ್ ಅವರ ತಾಯಿ ಕೂಡ ಇದ್ದಾರೆ. ವಿಡಿಯೋ ಆರಂಭದಲ್ಲಿ ಮಾ... ಎಂದು ಅಶ್ವಿನ್ ತಮ್ಮ ತಾಯಿಯನ್ನು ಕರೆಯುತ್ತಾರೆ. ಆಗ ತಾಯಿ ಮಗನ ಬಳಿಗೆ ಬರುತ್ತಾರೆ. ನಂತರ ಅಶ್ವಿನ್, ನಾನು ನಿಮಗೆ ಒಂದು ಸುದ್ದಿ ಹೇಳಬೇಕು ಮತ್ತು ನಿಮ್ಮ ಪ್ರತಿಕ್ರಿಯೆ ಬೇಕು ಎಂದು ಹೇಳುತ್ತಾನೆ. ಇದಕ್ಕೆ ಅವರ ತಾಯಿ ಓಕೆ ಎನ್ನುತ್ತಾರೆ. ಬಳಿಕ ತಾಯಿಯನ್ನು ಕುರ್ಚಿಯಲ್ಲಿ ಕೂರಿಸಿ, ತಾನು ಹಿಂದೆ ನಿಲ್ಲುತ್ತಾನೆ.
ಸಿನಿಮಾದಲ್ಲಿ ನಟಿಸಲು ನನಗೆ ಒಂದು ಆಫರ್ ಬಂದಿದೆ ಎಂದು ಅಶ್ವಿನ್ ಹೇಳುತ್ತಾರೆ. ಇದನ್ನು ಕೇಳಿದ ತಾಯಿ ತುಂಬಾ ಸಂತೋಷಗೊಳ್ಳುತ್ತಾರೆ. ಬಳಿಕ ನಿಜವಾದ ಸುದ್ದಿ ಏನು ಹೇಳು ಎಂದು ತಾಯಿ ಕೇಳಿದಾಗ ಇಲ್ಲ ನಾನು ನಿಜ ಹೇಳುತ್ತಿದ್ದೇನೆ ಎನ್ನುತ್ತಾರೆ ಅಶ್ವಿನ್. ಆಗ ತಾಯಿ ಮಗನನ್ನು ತಬ್ಬಿಕೊಂಡು, ಮುತ್ತುಕೊಟ್ಟು ಸಂಭ್ರಮಿಸುತ್ತಾರೆ.
ಆದರೆ, ಅಸಲಿ ಟ್ವಿಸ್ಟ್ ಏನೆಂದರೆ, ಮಾತು ಮುಂದುವರಿಸುವ ಮಗ ಅಶ್ವಿನ್, ನನಗೊಂದು ಸಿನಿಮಾಗೆ ಆಫರ್ ಬಂದಿದೆ. ಆದರೆ, ಅದು ಬ್ಲೂ ಫಿಲ್ಮ್ ಎನ್ನುತ್ತಾನೆ. ತಕ್ಷಣ ಆಕ್ರೋಶ ಹೊರಹಾಕುವ ತಾಯಿ ಇದನ್ನೆಲ್ಲ, ಪಾಲಕರ ಮುಂದೆ ಹೇಗೆ ಹೇಳುತ್ತೀಯಾ ಎಂದು ಬೈಯುತ್ತಾರೆ. ಕೊನೆಯಲ್ಲಿ ಅಶ್ವಿನ್ ಆ ಆಫರ್ ಅನ್ನು ತಿರಸ್ಕರಿಸಿದೆ ಎನ್ನುತ್ತಾರೆ. ಅಲ್ಲದೆ, ವಿಡಿಯೋ ಕೊನೆಯಲ್ಲಿ ತನಗೆ ಬಂದ ಆಫರ್ ಮೆಸೇಜ್ ಅನ್ನು ಪ್ರದರ್ಶಿಸಿದ್ದಾರೆ.
ನಾನು ಒಂದು ನಿಜ ಹೇಳುತ್ತೇನೆ. ಇದು ಜಾಹೀರಾತು ಶೂಟಿಂಗ್ ಅಲ್ಲ, ಇದೊಂದು ಪೋರ್ನ್ ಶೂಟಿಂಗ್. ಇದರಲ್ಲಿ ನೀನು ನಟಿಸುತ್ತಿದ್ದೀಯಾ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಇದು ಭಾರತದಲ್ಲಿ ಶೂಟ್ ಆಗುವುದಿಲ್ಲ ಬದಲಿಗೆ ವಿದೇಶದಲ್ಲಿ ಶೂಟ್ ಮಾಡಲಾಗುತ್ತದೆ. ಕೇವಲ ನಟಿಸಿ ಹಣ ಪಡೆದುಕೋ. ನಾವು ಉಚಿತ ವಿಮಾನ ಟಿಕೆಟ್ ಹಾಗೂ ವಸತಿ ವ್ಯವಸ್ಥೆ ಎಲ್ಲವನ್ನು ಒದಗಿಸುತ್ತೇವೆ. 3 ಲಕ್ಷ ರೂ. ಹಣ ಕೊಡುತ್ತೇವೆ ಮತ್ತು ತೆರಿಗೆ ಎಲ್ಲ ಕಡಿತವಾಗಿ 2.50 ಲಕ್ಷ ರೂ. ನಿನಗೆ ಸಿಗುತ್ತದೆ ಎಂದು ಅಶ್ವಿನ್ ಅವರಿಗೆ ಕಳುಹಿಸಿದ ಮೆಸೇಜ್ನಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೆ ಅಶ್ವಿನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದೊಂದು ತಮಾಷೆಯ ವಿಡಿಯೋ ಎಂದು ತಿಳಿದುಬಂದಿದೆ. ಈವರೆಗೂ 6 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 10 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನೂರಾರು ಕಾಮೆಂಟ್ಗಳು ಬಂದಿದ್ದು, ನಿಮ್ಮ ತಾಯಿಯ ಉತ್ತರವನ್ನು ಕೇಳಲು ನಾನು ಸಂಪೂರ್ಣ ವಿಡಿಯೋ ವೀಕ್ಷಿಸಿದ್ದೇನೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲ ಭಾರತೀಯ ಪಾಲಕರು ಇದೇ ರೀತಿ ವರ್ತಿಸುತ್ತಾರೆ ಎಂದು ಇನ್ನೊಬ್ಬ ನೆಟ್ಟಿಗ ಹೇಳಿದ್ದಾರೆ. (ಏಜೆನ್ಸೀಸ್)