ಹಸು ಮೇಯಿಸಲು ಹೋದ ಅಮ್ಮ-ಮಗ ನೀರುಪಾಲು

motherson
Published on

ಕೊಡಗು: ಹಸು ಮೇಯಿಸಲು ಹೋದ ಅಮ್ಮ ಮಗ ಇಬ್ಬರೂ ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯಿಂದ ವರದಿಯಾಗಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

32 ವರ್ಷ ವಯಸ್ಸಿನ ತಾಯಿ ರೇವತಿ ಮತ್ತು 12 ವರ್ಷದ ಮಗ ಕಾರ್ಯಪ್ಪ ನೀರುಪಾಲಾದವರು. ಪ್ರಕಾಶ್ ಎಂಬುವರ ಪತ್ನಿಯಾದ ರೇವತಿ ಮತ್ತು ಮಗ ಕಾರ್ಯಪ್ಪ ನಿನ್ನೆ ಹಸು ಮೇಯಿಸಲು ಹೋಗಿದ್ದು, ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಲಕ್ಷ್ಮಣತೀರ್ಥ ನದಿಯಲ್ಲಿ ತಾಯಿಯ ಮೃತದೇಹ ಪತ್ತೆಯಾಗಿದೆ. ಮಗನಿಗಾಗಿ ಹುಡುಕಾಟ ನಡೆದಿದೆ.

ಮಗ ಹಸುವಿನ ಹಿಂದೆ ಹೋಗಿ ನೀರುಪಾಲಾಗಿದ್ದು, ಮಗ ಬಿದ್ದಾಗ ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net