ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಾ ಬಾರದ ಊರಿಗೆ ತೆರಳಿದ ಅಭಿಮಾನಿ

fan
Published on

ಮಂಡ್ಯ: ತಮ್ಮ ನೆಚ್ಚಿನ ನಟ ಪುನೀತ್ ರಾಜ್​​ಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಆಘಾತಕ್ಕೆ ಮತ್ತೊಬ್ಬ ಅಭಿಮಾನಿ ಸಾವಪ್ಪಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ನಿವಾಸಿ ವೈ.ಎಸ್.ಸುರೇಶ್(45) ಎಂಬುವರು ಸಾವಿನ ಸುದ್ದಿ ನೋಡುತ್ತಲೇ ಮೃತಪಟ್ಟ ದುರ್ದೈವಿ.

ಇಂದು ಬೆಳಿಗ್ಗೆಯಿಂದಲೂ ಅಂತಿಮ ದರ್ಶನದ ಸುದ್ದಿ ನೋಡುತ್ತಿದ್ದ ಸುರೇಶ್, ಮಧ್ಯಾಹ್ನ ಏಕಾಏಕಿ ಕುಸಿದುಬಿದ್ದರು. ಹೀಗೆ ದಿಢೀರ್ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡುವಾಗಲೇ ಮೃತಪಟ್ಟರು. ಅವರ ಸಾವಿಗೂ ಹೃದಯಾಘಾತವೇ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮೃತ ಸುರೇಶ್​ ಪುನೀತ್ ಅಭಿಮಾನಿ ಮಾತ್ರವಲ್ಲದೇ ರಾಜ್ ಕುಟುಂಬದ ಅಭಿಮಾನಿಯಾಗಿದ್ದರು. ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಒಂದೆರಡು ಸಿನಿಮಾಗೆ ಚಿತ್ರಕಥೆಯನ್ನೂ ಬರೆದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net