ಮಂಜುಳಾ ಬಳಿ ಹಲವರ ವಿಡಿಯೋ ಪತ್ತೆ! Video

ccb
Published on

ಬೆಂಗಳೂರು: ಕಾಂಗ್ರೆಸ್ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬ್ಲ್ಯಾಕ್​ವೆುೕಲ್ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ದಂಪತಿಯ ಮೊಬೈಲ್​ಗಳನ್ನು ಸಿಸಿಬಿ ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಹಲವರ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಆರೋಪಿಗಳಾದ ಮಂಜುಳಾ ಪಾಟೀಲ್ ಮತ್ತು ಶಿವರಾಜ್ ಪಾಟೀಲ್​ನನ್ನು 8 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ಅವರ ಬಳಿ ಇದ್ದ 4 ಮೊಬೈಲ್​ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಮಂಜುಳಾ ಪಾಟೀಲ್ ಮಾಜಿ ಸಚಿವರನ್ನು ಮಾತ್ರ ಅಲ್ಲ, ಇನ್ನೂ ಹಲವರನ್ನು ಖೆಡ್ಡಾಕ್ಕೆ ಕೆಡವಿದ ಮಾಹಿತಿ ಆಕೆಯ ಮೊಬೈಲ್​ನಲ್ಲಿ ಪತ್ತೆಯಾಗಿದೆ. ಮಾಜಿ ಸಚಿವರು ಹಾಗೂ ಮಹಿಳೆ ನಡುವೆ ಮೊಬೈಲ್​ನಲ್ಲಿ ನಡೆದಿರುವ ಮೆಸೇಜ್, ವಿಡಿಯೋ, ಆಡಿಯೋ ಸಂದೇಶಗಳ ಪರಿಶೀಲನೆ ನಡೆಸಲಾಗಿದೆ. ದೂರುದಾರರಾಗಿರುವ ಮಾಜಿ ಸಚಿವರ ಪುತ್ರ ರಿತೇಶ್ ಹಾಗೂ ಮಾಜಿ ಸಚಿವರಿಂದಲೂ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮಂಜುಳಾ ಪಾಟೀಲ್ ದಂಪತಿ ಇದೇ ರೀತಿ ಬೇರೆಯವರಿಗೂ ಬ್ಲ್ಯಾಕ್​ವೆುೕಲ್ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿರುವ ಅವರ ಮನೆಗೆ ತೆರಳಿ ಪರಿಶೀಲನೆ ಮಾಡುವ ಸಾಧ್ಯತೆ ಇದೆ.

ಫೋನ್​ಗಳಲ್ಲಿ 8 ಜನರ ವಿಡಿಯೋ ಪತ್ತೆ

ಮಂಜುಳಾ ಪಾಟೀಲ್ ಬಳಿ ಪತ್ತೆಯಾಗಿರುವ ಸ್ಮಾರ್ಟ್​ಪೋನ್​ಗಳನ್ನು ಪರಿಶೀಲಿಸಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಜಿಪಂ ಮಾಜಿ ಸದಸ್ಯ, ಪೊಲೀಸ್ ಅಧಿಕಾರಿ, ಪಿಡಬ್ಲ್ಯುಡಿ ಅಧಿಕಾರಿ ಸೇರಿ ಇನ್ನಿತರ ಎಂಟು ಜನರ ವಿಡಿಯೋಗಳು ಪತ್ತೆಯಾಗಿದೆ ಎನ್ನಲಾಗಿದೆ.

ವಿಡಿಯೋ ಮುಂದಿಟ್ಟು ಬ್ಲ್ಯಾಕ್​ವೆುೕಲ್

ಹಲವು ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿದ್ದ ಮಂಜುಳಾ, ಮಹಮ್ಮದ್ ನಲಪಾಡ್ ಬ್ರಿಗೇಡ್​ನ ಕಲಬುರಗಿ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್​ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ವಿಡಿಯೋ ಕಾಲ್​ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಬಳಿಕ ಇವುಗಳನ್ನು ಮುಂದಿಟ್ಟು ಹಣಕ್ಕೆ ಕೇಳಲಾರಂಭಿಸಿದ್ದಳು. 2 ದಿನದ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ನಡೆಸಲು ಮಂಜುಳಾ ದಂಪತಿ ಮುಂದಾಗಿದ್ದರು. ಈ ಬಗ್ಗೆ ರಿತೇಶ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಏನಿದು ಪ್ರಕರಣ?

ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸ್​ಆಪ್ ಮೂಲಕ ವಿಡಿಯೋ ಕರೆಗಳನ್ನು ಮಾಡಿ ಬಳಿಕ ಅವುಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕೆ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಶನಿವಾರ ಬೆಂಗಳೂರಿನ ಗರುಡಾ ಮಾಲ್ ಬಳಿ ಬಂಧಿಸಿದ್ದರು. ಆರೋಪಿಗಳು ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net