

ಬ್ರೆಜಿಲ್: ಗುರುವಾರ ಇಲ್ಲಿನ ಎನ್ಜಿಒ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2022 ರಲ್ಲಿ ಬ್ರೆಜಿಲ್ನಲ್ಲಿ ಗಂಟೆಗೆ ಸರಾಸರಿ ಎಂಟು ಅತ್ಯಾಚಾರಗಳು ದಾಖಲಾಗುತ್ತಿವೆ. ಇವರಲ್ಲಿ 60 ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಬ್ರೆಜಿಲಿಯನ್ ಫೋರಮ್ ಆಫ್ ಪಬ್ಲಿಕ್ ಸೆಕ್ಯುರಿಟಿ (ಎಫ್ಬಿಎಸ್ಪಿ) ಪ್ರಕಾರ, ಕಳೆದ ವರ್ಷ ದೇಶದಲ್ಲಿ 74,930 ಅತ್ಯಾಚಾರಗಳು ವರದಿಯಾಗಿದೆ. ಅಂದರೆ 2021 ರಿಂದ 8.2 ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ.
ಪೊಲೀಸ್ ದಾಖಲೆಗಳು ಮತ್ತು ಇತರ ಅಧಿಕೃತ ದಾಖಲೆಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 10 ಪ್ರತಿಶತಕ್ಕಿಂತ ಹೆಚ್ಚಿನವರು ನಾಲ್ಕು ವರ್ಷಕ್ಕಿಂತ ಚಿಕ್ಕವರಾಗಿದ್ದಾರೆ.
ಕೋವಿಡ್ ಸಮಯದಲ್ಲಿ ಶಾಲೆಗಳು ದೀರ್ಘಕಾಲದವರೆಗೆ ಮುಚ್ಚಿದ್ದವು. ಆ ನಂತರ ಶಾಲೆಗಳ ಪುನರಾರಂಭದೊಂದಿಗೆ ದೂರುಗಳ ಸಂಖ್ಯೆ ಹೆಚ್ಚಾಯಿತು ಎಂದು ಎಫ್ಬಿಎಸ್ಪಿ ಸಂಯೋಜಕಿ ಜೂಲಿಯಾನಾ ಮಾರ್ಟಿನ್ಸ್ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ವರದಿಯಾಗಿಲ್ಲ. 2022 ರಲ್ಲಿ 1,437 ಮಹಿಳೆಯರ ಹತ್ಯೆಯಾಗಿದ್ದು, 2021 ರಿಂದ 6.1 ರಷ್ಟು ಹೆಚ್ಚಳವಾಗಿದೆ ಮತ್ತು 245,713 ಕೌಟುಂಬಿಕ ಹಿಂಸೆಯ ಪ್ರಕರಣಗಳು 2.9 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೂಡ ಎನ್ಜಿಒ ಹೇಳಿದೆ.
ಈ ಹಿನ್ನೆಲೆಯಲ್ಲಿ ಬ್ರೆಜಿಲ್ನ ಸಾವೊ ಪಾಲೊದಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಕೊಡಿಸುವಂತೆ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು.