ಠೇವಣಿಯಿಂದ ಹೆಚ್ಚಿನ ಲಾಭ ಸಾಧ್ಯ

hhr co-opp
ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಕೆ.ಎಂ.ಅಣ್ಣಯ್ಯ ಉದ್ಘಾಟಿಸಿದರು. ಬಿ.ಎಸ್.ನಾಗರಾಜ್, ಎಂ.ಜಿ.ಶಿವಾನಂದಗೌಡ, ಕೆ.ವಿ.ಶಿವಕುಮಾರ್, ಎಚ್.ಜಿ.ವೆಂಕಟೇಶ್ ಇತರರಿದ್ದರು.
Published on

ಹೊಳೆಹೊನ್ನೂರು: ಸಹಕಾರ ಸಂಘದಲ್ಲಿ ಹೆಚ್ಚು ಠೇವಣಿ ಇಟ್ಟು ಸ್ವಂತ ಬಂಡವಾಳದಿಂದ ಅಧಿಕ ಲಾಭಗಳಿಸಲು ಸಾಧ್ಯ ಎಂದು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಅಣ್ಣಯ್ಯ ಹೇಳಿದರು.

ಇಲ್ಲಿನ ಸತ್ಯಧರ್ಮ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ರೈತರ ಸೇವಾ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸಂಘವು ವಿವಿಧ ಆರ್ಥಿಕ ಚಟುವಟಿಕೆ ನಡೆಸುತ್ತಿದೆ. ಜತೆಗೆ ರೈತರ ಅಭಿವೃದ್ಧಿಗೆ ನಾನಾ ರೀತಿಯ ಸಾಲ ಸೌಲಭ್ಯ ನೀಡುತ್ತಿದೆ. ಆದರೆ ರೈತರಿಗೆ ಸಕಾಲದಲ್ಲಿ ಸಾಲ ನೀಡಲು ಇತರೆ ಬ್ಯಾಂಕಿನ ಸಹಕಾರ ಪಡೆಯಬೇಕಾಗುತ್ತದೆ. ಆಗ ಬಡ್ಡಿಯ ಹೊರೆಯಾಗಿ ಲಾಭಾಂಶ ಕಡಿಮೆ ಆಗುತ್ತಿದೆ. ಆದ್ದರಿಂದ ರೈತರು ಹೆಚ್ಚು ಠೇವಣಿ ಮಾಡಬೇಕು. ಸಕಲ ಸದಸ್ಯರ ಸಭೆಯಲ್ಲಿನ ಸಲಹೆ ಹಾಗೂ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು.
ಮಾಜಿ ಅಧ್ಯಕ್ಷ ಬಿ.ಎಸ್.ನಾಗರಾಜ್, ಎಂ.ಜಿ.ಶಿವಾನಂದ ಗೌಡ, ಕೆ.ವಿ.ಶಿವಕುಮಾರ್, ಎಚ್.ಜಿ.ವೆಂಕಟೇಶ್, ಎನ್.ಪಿ.ನಾಗೇಶಪ್ಪ, ಜಿ.ಎನ್.ಸತೀಶ್, ಎಸ್.ಬಿ.ಸಿದ್ದಪ್ಪ ಜೆ.ಎಚ್.ರಂಗನಾಥ, ಅಣ್ಣಯ್ಯ, ರಾಮಚಂದ್ರಪ್ಪ, ಲಕ್ಷ್ಮ್ಮಮ್ಮ, ಟಿ.ಎಂ.ಶಿವಮೂರ್ತಿ, ಕೆ.ಎಂ.ನಾಗರಾಜ್, ವೀಣಾ, ಎಂ.ಎಚ್.ಶಿವಮೂರ್ತಿ, ದುರುಗೇಶ್ ಆರ್.ಧರ್ಮರಾಜ್, ಸಿಇಒ ಎಂ.ಜಿ.ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net