ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಂತಹ ವಾಯು ತಿರುವಿಕೆಯ ಲಕ್ಷಣಗಳು ಪ್ರಸ್ತುತ ಕ್ಷೀಣಿಸುತ್ತಿವೆ. ಇದರ ನೇರ ಪರಿಣಾಮವಾಗಿ, ಜೂನ್ 4ರಂದು ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸಿದರೂ, ಆರಂಭಿಕ ಹಂತದಲ್ಲಿ ಅವು ಸಾಕಷ್ಟು ದುರ್ಬಲವಾಗಿರುವ ಸಾಧ್ಯತೆ ಇದೆ. ಆದರೆ, ಕರಾವಳಿ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಪ್ರಮುಖ ಮಾಹಿತಿ ನೀಡಿದೆ. ಸೋಮಾಲಿಯ ಜೆಟ್ ಸ್ಟ್ರೀಮ್ (ಖಟಞಚ್ಝಜಿ ಒಛಿಠಿ ಖಠ್ಟಿಛಿಞ)ತೀವ್ರಗೊಳ್ಳುವ ಪರಿಣಾಮದಿಂದಾಗಿ, ಜೂನ್ ತಿಂಗಳ ಎರಡನೇ ವಾರದಲ್ಲಿ ಅರಬ್ಬಿ ಸಮುದ್ರದಿಂದ ಕರಾವಳಿ ಕರ್ನಾಟಕದ ಕಡೆಗೆ ಬಲವಾದ ಪಶ್ಚಿಮ ಮಾರುತಗಳು ಬೀಸಲಿವೆ. ಇದರ ಫಲವಾಗಿ ಜೂನ್ ಎರಡನೇ ವಾರದಿಂದ ಕರಾವಳಿಯುದ್ದಕ್ಕೂ ಭಾರಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.