ಕೋತಿಗಳೇ ಮದ್ಯ ಕುಡಿದಿವೆ!..ಈ ಉತ್ತರ ನಂಬಬಹುದಾ?

Monkey
Published on

ಚಿಕ್ಕಬಳ್ಳಾಪುರ: ದಾಸ್ತಾನಿಟ್ಟಿದ್ದ ಮದ್ಯದಲ್ಲಿ 21 ಟಿನ್ ಬಿಯರ್ ಅನ್ನು ಕೋತಿಗಳು ಕುಡಿದಿವೆ ಎಂದು ನಂದಿ ಗಿರಿಧಾಮದಲ್ಲಿರುವ ಮಯೂರ ಪೈನ್​ಟಾಪ್ ಹೋಟೆಲ್ ವ್ಯವಸ್ಥಾಪಕರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ಏ.21ರಂದು ಹೋಟೆಲ್​ನಲ್ಲಿದ್ದ ಮದ್ಯದ ದಾಸ್ತಾಸು ಪರಿಶೀಲಿಸಿ ಲೆಕ್ಕ ಇಡಲಾಗಿತ್ತು. ಶನಿವಾರ ಪರಿಶೀಲಿಸಿದಾಗ 300 ಎಂಎಲ್​ನ 21 ಟಿನ್ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಕೋತಿಗಳು ಹಾಳು ಮಾಡಿವೆ ಎಂದಿದ್ದಾರೆ. ಮದ್ಯವನ್ನು ದುಬಾರಿ ಬೆಲೆಗೆ ಮಾರಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ್​ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net