

ಬೆಂಗಳೂರು: ಅಂತೂ ರಾಜ್ಯದಲ್ಲಿ ಎಣ್ಣೆಪ್ರಿಯರು ಇನ್ಮುಂದೆ ನಿರಾಳವಾಗಿರಬಹುದು. ಮೂರನೇ ಹಂತದ ಲಾಕ್ಡೌನ್ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ..!
ಇಂದು ರಾಜ್ಯ ಅಬಕಾರಿ ಆಯುಕ್ತರು ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿರುವುದಾಗಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮೇ 4 (ಸೋಮವಾರ)ರಿಂದ ರಾಜ್ಯದ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಎಂಎಸ್ಐಎಲ್ ಮಳಿಗೆಗಳಲ್ಲಿ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಎಂಎಸ್ಐಎಲ್ ಮದ್ಯ ಮಳಿಗೆಗಳಾದ ಸಿಎಲ್-2, ಸಿಎಲ್ 11-ಸಿ ಗಳು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರಬೇಕು. ಕೇಂದ್ರ, ರಾಜ್ಯ, ಜಿಲ್ಲೆ ಮತ್ತು ಆಯಾ ಸ್ಥಳೀಯ ಆಡಳಿತಗಳಿಂದ ಕಂಟೇನ್ಮೆಂಟ್ ವಲಯಗಳು ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಯಾವ ಕಾರಣಕ್ಕೂ ಎಣ್ಣೆ ಸಿಗೋದಿಲ್ಲ.