ಮದ್ಯದಂಗಡಿ ತೆರೆಸುವಂತೆ ದೇವರ ಮೊರೆ ಹೋದ ಯುವಕ, ಎಂಎಸ್​ಐಎಲ್ ಮಳಿಗೆ​ ಬಾಗಿಲಿಗೆ ಪೂಜೆ

POOJE TO LIQUOR SHOP
Published on

ಚಾಮರಾಜನಗರ: ಮಹಾಮಾರಿ ಕರೊನಾ ತೊಲಗಿಸಿ ನಮ್ಮನ್ನ ರಕ್ಷಿಸು ದೇವರೆ ಎಂದು ವಿಶ್ವಾದ್ಯಂತ ಕೋಟ್ಯಂತರ ಜನರು ದೇವನಾಮ ಜಪಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಂದ್​ ಆಗಿರುವ ಮದ್ಯದಂಗಡಿ ಶೀಘ್ರವೇ ತೆರೆಯಲೆಂದು ಪ್ರಾರ್ಥಿಸಿ ​ಎಂಎಸ್​ಐಎಲ್​ ಮಳಿಗೆಯೊಂದರ ಬಾಗಿಲಿಗೆ ಪೂಜೆ ಸಲ್ಲಿಸಿದ್ದಾನೆ!

ನಗರದ ಮಹದೇವ ಪ್ರಸಾದ್​ ಎಂಬಾತ ಶನಿವಾರ ಖಾಸಗಿ ಬಸ್​ ನಿಲ್ದಾಣ ಪಕ್ಕದ ರಸ್ತೆಯಲ್ಲಿರುವ ಎಂಎಸ್​ಐಎಲ್​ ಮಳಿಗೆ ಬಾಗಿಲಿಗೆ ಅರಿಶಿಣ-ಕುಂಕುಮ ಹಚ್ಚಿ, ನೈವೇದ್ಯಕ್ಕೆಂದು ಬಾಳೆಹಣ್ಣು ಇಟ್ಟು, ಗಂಧದಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ದಾನೆ. ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಪ್ರಾರ್ಥಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net