ಏಕಾಏಕಿ ಹಾರಿ ಬಂದು ತೊಡೆಯ ಮೇಲೆ ಕೂತ ಕೋತಿ; ಇದು ಅಸಾಮಾನ್ಯ ಅನುಭವ ಎಂದ Shashi Tharoor​

Shashi Tharoor
Published on

ನವದೆಹಲಿ: ಕಾಂಗ್ರೆಸ್​​​ ಸಂಸದ ಶಶಿ ತರೂರ್(Shashi Tharoor),​ ಅವರ ನಿವಾಸ ಉದ್ಯಾನದಲ್ಲಿ ಪೇಪರ್​ ಓದುವ ಸಮಯದಲ್ಲಿ ಏಕಾಏಕಿ ಹಾರಿ ಬಂದ ಕೋತಿಯೊಂದು ತೊಡೆಯ ಮೇಲೆ ಕೂತು ಮಲಗಿದ ಅನುಭವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೋತಿ ಬಂದ ಕ್ಷಣ ಮೊದಲು ಸ್ಪಲ ಭಯ ಆಗಿತ್ತು. ಆದರೂ ನಾನು ಸುಮ್ಮನೇ ಕುಳಿತ್ತೀದ್ದೆ. ಸಲ್ಪ ಹೊತ್ತಿನ ಬಳಿ ಅದು ಹಾರಿ ಹೊಯಿತು ಎಂದು ತಮ್ಮ ಆನುಭವನ್ನು ಹೇಳಿಕೊಂಡಿದ್ದಾರೆ.

ತಮ್ಮ ಎಕ್ಸ್​ ಖಾತೆ ಈ ಕುರಿತು ಪೋಸ್ಟ್​​ ಮಾಡಿರುವ ಅವರು, ''ಇಂದು ಒಂದು ಅಸಾಮಾನ್ಯ ಅನುಭವವಾಯಿತು. ನಾನು ತೋಟದಲ್ಲಿ ಕುಳಿತು ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುತ್ತಿರುವಾಗ ಒಂದು ಕೋತಿ ಅಲೆದಾಡಿತು, ನೇರವಾಗಿ ನನ್ನ ಬಳಿಗೆ ಬಂದು ನನ್ನ ಮಡಿಲಲ್ಲಿ ನಿಲ್ಲಿಸಿತು. ಅವನು(ಕೋತಿ) ಹಸಿವಿನಿಂದ ನಾವು ಕೊಟ್ಟ ಒಂದೆರಡು ಬಾಳೆಹಣ್ಣುಗಳನ್ನು ತಿಂದು, ನನ್ನನ್ನು ತಬ್ಬಿ ನನ್ನ ಎದೆಯ ಮೇಲೆ ತಲೆಯನ್ನಿಟ್ಟು ಮಲಗಿದನು. ನಾನು ನಿಧಾನವಾಗಿ ಎದ್ದೇಳಲು ಪ್ರಾರಂಭಿಸಿದೆ, ಅವನು ಹಾರಿ ಓಡಿಹೋದನು'' ಎಂದು ಹೇಳಿದ್ದಾರೆ.

ಇದೀಗ, ಸಂಸದ ಶಶಿ ತರೂರು ಹಂಚಿಕೊಂಡಿರು ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅಲ್ಲದೆ, ಕೆಲ ನೆಟ್ಟಿಗರು ಈ ಫೊಸ್ಟ್​ಗೆ ತರೆಹವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ,(ಏಜೆನ್ಸಿಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net