ರೇಣುಕಾಚಾರ್ಯರನ್ನು ಅಟ್ಟಾಡಿಸಿದ್ದ ಕೋತಿಗೆ ತ್ಯಾವರೆಕೊಪ್ಪದಲ್ಲಿ ಸಿಕ್ತು ಸಂಗಾತಿ!

renukacharya
Published on

ಶಿವಮೊಗ್ಗ: ಹೊನ್ನಾಳಿ ಪಟ್ಟಣದ ಜನರಿಗೆ ಆತಂಕ ಸೃಷ್ಟಿಸಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಮೇಲೂ ದಾಳಿಗೆ ಯತ್ನಿಸಿದ್ದ ಮುಸಿಯಾ ಈಗ ತ್ಯಾವರೆಕೊಪ್ಪ ಪ್ರಾಣಿಸಂಗ್ರಹಾಲಯದ ಪಂಜರ ಸೇರಿದ್ದು ಅದಕ್ಕೊಂದು ಸಂಗಾತಿಯೂ ಸಿಕ್ಕಿರುವುದು ವಿಶೇಷ.

ಹೊನ್ನಾಳಿಯಲ್ಲಿ ಬುಧವಾರ ಸೆರೆ ಹಿಡಿದ ಮುಸಿಯಾ ರಾತ್ರಿ ವೇಳೆಗೆ ತ್ಯಾವರೆಕೊಪ್ಪ ಪ್ರಾಣಿ ಸಂಗ್ರಹಾಲಯಕ್ಕೆ ತರಲಾಗಿದ್ದು, ಗುರುವಾರ ಬೆಳಗ್ಗೆಯಿಂದ ಚಟುವಟಿಕೆಯಿಂದ ಪಂಜರದೊಳಗೆ ಓಡಾಡಿಕೊಂಡಿದೆ ಎಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್‌ಚಂದ್ರ ತಿಳಿಸಿದ್ದಾರೆ. ಇದನ್ನೂ ಓದಿರಿ ನಿನ್ನ ಜತೆಗಿನ ಅಕ್ರಮ ಸಂಬಂಧ ಮುರಿದುಕೊಳ್ಳಲು ನಾ ಒಲ್ಲೆ… ಎನ್ನುತ್ತಲೇ ಪ್ರಿಯಕರನ ಜತೆಗೂಡಿ ಹೀಗಾ ಮಾಡೋದು?

ಪ್ರಾಣಿ ಸಂಗ್ರಹದ ಪಟ್ಟಿಯಲ್ಲಿತ್ತು: ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಇನ್ನೊಂದಿಷ್ಟು ಹೊಸ ಬಗೆಯ ಪ್ರಾಣಿಗಳನ್ನು ತರುವ ಬಗ್ಗೆ ಕಳೆದೊಂದು ವರ್ಷದಿಂದ ಪ್ರಯತ್ನ ನಡೆಯುತ್ತಲೇ ಇದೆ. ಹೊಸ ಪ್ರಾಣಿಗಳ ಪಟ್ಟಿಯಲ್ಲಿ ಮುಸಿಯಾ ಕೂಡಾ ಸೇರಿತ್ತು. ಈಗಾಗಲೇ ಪ್ರಾಣಿಸಂಗ್ರಹಾಲಯದಲ್ಲಿ ಹೆಣ್ಣು ಮುಸಿಯಾ ಇರುವುದರಿಂದ ಇನ್ನೊಂದು ಗಂಡು ಜಾತಿಯನ್ನು ತಂದರೆ ವಂಶಾಭಿವೃದ್ಧಿಯಾಗುತ್ತದೆ ಎಂದು ಸಿಂಹಧಾಮದ ಅಧಿಕಾರಿಗಳು ನಿರ್ಧರಿಸಿದ್ದರು.

ಇದಕ್ಕೆಂದು ಹಂಪಿ ಅಟಲ್‌ಬಿಹಾರಿ ವಾಜಪೇಯಿ ಪಾರ್ಕ್‌ನೊಂದಿಗೆ ಪತ್ರ ವ್ಯವಹಾರವನ್ನೂ ನಡೆಸಲಾಗಿತ್ತು. ಆದರೆ ಈಗ ಅನಾಯಸವಾಗಿ ಯೋಜನೆ ಈಡೇರಿದಂತಾಗಿದೆ. ಮುಂದಿನ ದಿನಗಲ್ಲಿ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಪ್ರವಾಸಿಗರಿಗೆ ಹೊಸ ಪ್ರಾಣಿಯ ವೀಕ್ಷಣೆ ಸಾಧ್ಯವಾಗಲಿದೆ. ಇದನ್ನೂ ಓದಿರಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ಎರಡೂ ಹೊಂದಿಕೊಂಡಿವೆ: ಈಗಾಗಲೇ ತ್ಯಾವರೆಕೊಪ್ಪ ಸಿಂಹಧಾಮದಲ್ಲಿರುವ ಮುಸಿಯಾ ಜತೆ ಹೊನ್ನಾಳಿಯಿಂದ ಬಂದಿರುವ ಮುಸಿಯಾ ಹೊಂದಿಕೊಂಡಿದೆ. ಅರವಳಿಕೆ ಮದ್ದಿನ ಶಕ್ತಿ ಕಡಿಮೆಯಾದ ಬಳಿಕ ಇಲ್ಲಿದ್ದ ಹೆಣ್ಣು ಮುಸಿಯಾ ಜತೆ ಕದನಕ್ಕೆ ಇಳಿಯಬಹುದೆಂಬ ಆತಂಕ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳದಾಗಿತ್ತು. ಆದರೆ ಈಗ ಆತಂಕ ದೂರಾಗಿದೆ.

ಹೊನ್ನಾಳಿಯಿಂದ ಬಂದಿರುವ ಮುಸಿಯಾ ಈಗ ಆರೋಗ್ಯವಾಗಿದ್ದು, ಲವಲವಿಕೆಯಿಂದ ಓಡಾಡಿಕೊಂಡಿದೆ. ಆದರೂ ಕೆಲ ದಿನವರೆಗೆ ಅದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಮೇಲ್ನೋಟಕ್ಕೆ ಆರೋಗ್ಯ ಎನಿಸಿದರೂ ಮೈಮರೆಯುವಂತಿಲ್ಲ. ಅದು ಆಹಾರ ಸೇವಿಸುವ ಪ್ರಮಾಣ, ವರ್ತನೆ ಎಲ್ಲವನ್ನೂ ಗಮನಿಸಲಾಗುವುದು ಎಂದು ಮುಕುಂದ್‌ಚಂದ್ರ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net