ವಿದ್ಯಾರ್ಥಿಗಳ ಓದಿನ ಮೇಲಿರಲಿ ನಿಗಾ

sslc exam
ಆನಂದಪುರದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಲಿತಾಂಶ ಸುಧಾರಣೆ ತರಬೇತಿ ಕಾರ್ಯಾಗಾರದಲ್ಲಿ ಡಯಟ್ ಉಪನಿರ್ದೇಶಕಿ ಕೆ.ಆರ್.ಬಿಂಬಾ ಅವರನ್ನು ಗೌರವಿಸಲಾಯಿತು. ಶಿವಕುಮಾರ್, ಹನುಮಂತಪ್ಪ, ಜಬೀವುಲ್ಲಾ, ಜಯಣ್ಣ ಇತರರಿದ್ದರು.
Published on

ಆನಂದಪುರ: ಲಿತಾಂಶ ಹೆಚ್ಚಳಕ್ಕೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಯಾಗಬೇಕು ಎಂದು ಶಿವಮೊಗ್ಗದ ಡಯಟ್ ಉಪನಿರ್ದೇಶಕಿ ಕೆ.ಆರ್.ಬಿಂಬಾ ತಿಳಿಸಿದರು.

ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಸೋಮವಾರ ಪ್ರೇರಣಾ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಗೆ ಅಗತ್ಯ ಚಟುವಟಿಕೆ ರೂಪಿಸಬೇಕು. ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ವಿವಿಧ ತಂತ್ರಾಂಶ ಬಳಸಿಕೊಳ್ಳಬೇಕು. ಲವಲವಿಕೆಯಿಂದ ಕಲಿಯುವ ಮತ್ತು ಕಲಿಸುವ ಕಾರ್ಯದ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಪಾಲಕರಿಗೆ ಆಗಾಗ ವಿದ್ಯಾರ್ಥಿಗಳ ಸಾಧನೆ ಮತ್ತು ತೊಡಕುಗಳ ಬಗ್ಗೆ ಮನದಟ್ಟು ಮಾಡಿಸಬೇಕು ಎಂದರು.
ಡಯಟ್‌ನ ಉಪನ್ಯಾಸಕರಾದ ಶಿವಕುಮಾರ್, ಹನುಮಂತಪ್ಪ, ಜಭಿಯುಲ್ಲಾ, ಜಯಣ್ಣ, ಕೆಪಿಎಸ್ ಉಪ ಪ್ರಾಂಶುಪಾಲ ಈಶ್ವರಪ್ಪ, ಸಾಗರ ತಾಲೂಕು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ, ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಆರ್.ಮಂಜಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net